
ಬೆಂಗಳೂರು: ವಾಣಿಜ್ಯ ತೆರಿಗೆ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಅಧಿಕಾರಿಗಳ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದಿಂದ ದಾಳಿ ನಡೆಸಲಾಗಿದೆ.
ಸಿಟಿಓ ಸೈಯದ್ ಮೊಹಮ್ಮದ್ ಮನೆಯಲ್ಲಿ ಹಣ, ಆಭರಣ ಪತ್ತೆಯಾಗಿದೆ. 3,35,300 ರೂಪಾಯಿ ನಗದು, 380 ಗ್ರಾಂ ಚಿನ್ನಾಭರಣ ಹಾಗೂ ಒಂದು ಕಾರು, ಒಂದು ಬೈಕ್ ಪತ್ತೆಯಾಗಿದೆ. ಕಾರು ಚಾಲಕ ಪಿ ಕೃಷ್ಣಮೂರ್ತಿ ನಿವಾಸದಲ್ಲಿ 2100 ರೂ. ನಗದು ಪತ್ತೆಯಾಗಿದೆ.
ಮೈಸೂರಿನ ಸಿಟಿಐ ಸಿ.ಎಂ. ಯಶವಂತ್ ಅವರ ಮನೆಯಲ್ಲಿ ಆಭರಣ ಪತ್ತೆಯಾಗಿದೆ. 50 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.
ಲಾರಿ ಚಾಲಕರನ್ನು ತಡೆದು ಬೆದರಿಸಿ ಇವರು ಲಂಚ ಸ್ವೀಕರಿಸುತ್ತಿದ್ದ ಆರೋಪ ಕೇಳಿಬಂದಿದೆ. ಚೆಕ್ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ಲಂಚ ಸ್ವೀಕರಿಸುತ್ತಿದ್ದರು. ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಲಂಚದ ಹಣ ವರ್ಗಾವಣೆಯಾಗಿತ್ತು. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಎಸಿಬಿ ಸಿಬ್ಬಂದಿ ಮೊಬೈಲ್ ಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಈ ಬದ್ಗೆ ದೂರು ದಾಖಲಾಗಿತ್ತು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.