ಬೀದರ್: 15 ಲಕ್ಷ ರೂಪಾಯಿ ಲಂಚ ಪಡೆಯುವಾಗಲೇ ಬೀದರ್ ಗ್ರೇಡ್ -1 ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಜಮೀನು ಮ್ಯೂಟೇಷನ್ ಮಾಡಿಕೊಡಲು ಲೀಲಾಧರ್ ಪಟೇಲ್ ಅವರಿಂದ 15 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ. ಬೀದರ್ ನಗರದ ಚಿದ್ರಿಯಾ ಸರ್ವೆ ನಂಬರ್ 15 ರಲ್ಲಿನ 2 ಎಕರೆ 25 ಗುಂಟೆ ಜಮೀನು ಖರೀದಿಸಿದ್ದು, ಕೇಸ್ ವರ್ಕರ್ ರಿಜಿಸ್ಟ್ರೇಷನ್ ಮಾಡಲು ತಹಶೀಲ್ದಾರ್ ಭೇಟಿ ಮಾಡುವಂತೆ ಹೇಳಿದ್ದು, ಅವರು 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ 20 ಲಕ್ಷಕ್ಕೆ ಮಾತುಕತೆಯಾಗಿ 15 ಲಕ್ಷ ರೂಪಾಯಿ ಮನೆಗೆ ತಂದುಕೊಡುವಂತೆ ಹೇಳಿದ್ದಾರೆ. ಲೀಲಾಧರ್ ಎಸಿಬಿಗೆ ದೂರು ನೀಡಿ ಮನೆಯಲ್ಲಿ ತಹಶೀಲ್ದಾರ್ ಲಂಚ ಪಡೆಯುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.