
ಬೆಂಗಳೂರು: ಎಸಿಬಿ ಬಲೆಗೆ ಬಿದ್ದಿದ್ದ BWSSB ಜೆಇ ಗೆ ಕೋರ್ಟ್ ನಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಜೆಇ ಚೆನ್ನಕೇಶಪ್ಪ ಅವರಿಗೆ 23 ನೇ ಸಿಟಿ ಸಿವಿಲ್ ಕೋರ್ಟ್ ಶಿಕ್ಷೆ ವಿಧಿಸಿದೆ. 2017 ರಲ್ಲಿ BWSSB ಜೆಇ ಡಿ. ಚೆನ್ನಕೇಶಪ್ಪ ಎಸಿಬಿ ಬಲೆಗೆ ಬಿದ್ದಿದ್ದರು. ಬೆಂಗಳೂರಿನ ನಾಗರಬಾವಿಯ ವಾಣಿಜ್ಯ ಕಟ್ಟಡಕ್ಕೆ ನೀರಿನ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು 30,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, 10 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು. 2017 ರಲ್ಲಿ ಎಸಿಬಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಚನ್ನಕೇಶಪ್ಪ ಅವರಿಗೆ 5 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ ಎನ್ನಲಾಗಿದೆ.