ಧಾರವಾಡ: ಭೂ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಕಾರಣ ಧಾರವಾಡ ಉಪವಿಭಾಗಾಧಿಕಾರಿ ಸರ್ಕಾರಿ ವಾಹನ ಜಪ್ತಿ ಮಾಡಲಾಗಿದೆ.
ನವಲಗುಂದ ತಾಲೂಕಿನ ರೈತ ಮಹಿಳೆ ನಾಗವ್ವ ಕೇರಿ ಅವರಿಗೆ ಸೇರಿದ 2 ಎಕರೆ 30 ಗುಂಟೆ ಜಮೀನನ್ನು ಉಪವಿಭಾಗಾಧಿಕಾರಿ ಕಚೇರಿಯಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ನಾಗವ್ವ ಅವರಿಗೆ 35 ಲಕ್ಷ ರೂಪಾಯಿ ಪರಿಹಾರ ಮಾತ್ರ ನೀಡಲಾಗಿದ್ದು, ಕಡಿಮೆ ಪರಿಹಾರ ನೀಡಿರುವುದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಆಲಿಸಿದ ನ್ಯಾಯಾಲಯ ಜಮೀನು ಮಾಲೀಕರಿಗೆ 1.70 ಕೋಟಿ ರೂ ಪರಿಹಾರ ನೀಡಲು ಆದೇಶಿಸಿದ್ದು, ಕೋರ್ಟ್ ಆದೇಶ ನೀಡಿ 9 ತಿಂಗಳಾದರೂ ಜಮೀನು ಮಾಲೀಕರಿಗೆ ಪರಿಹಾರ ನೀಡಿರಲಿಲ್ಲ.
ಧಾರವಾಡದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಉಪವಿಭಾಗಾಧಿಕಾರಿ ಸರ್ಕಾರಿ ವಾಹನ ಜಪ್ತಿಗೆ ಆದೇಶಿಸಿದ್ದು, ಅದರಂತೆ ಕೋರ್ಟ್ ಸಿಬ್ಬಂದಿ ಶುಕ್ರವಾರ ಎಸಿ ವಾಹನ ಜಪ್ತಿ ಮಾಡಿದ್ದಾರೆ.