ಬೆಂಗಳೂರು: ರಾಜ್ಯದ ಉಪ ವಿಭಾಗಾಧಿಕಾರಿಗಳ ಎಸಿ ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ಕೇಸ್ ಗಳನ್ನು ಫೆಬ್ರವರಿ ವೇಳೆಗೆ ಇತ್ಯರ್ಥಪಡಿಸಲು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಶನಿವಾರ ರಾಜ್ಯದ ವಿವಿಧ ಉಪ ವಿಭಾಗಾಧಿಕಾರಿಗಳೊಂದಿಗೆ ವರ್ಚುಯಲ್ ಸಭೆ ನಡೆಸಿದ ಸಚಿವರು, ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 59,339 ಪ್ರಕರಣಗಳಲ್ಲಿ ಶೇಕಡ 70ರಷ್ಟು ವಿಲೇವಾರಿಯಾಗಿದ್ದು, ಉಳಿದ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎಸಿ ಕಂದಾಯ ಕೋರ್ಟುಗಳಲ್ಲಿ ಈ ಹಿಂದಿನ ಸರ್ಕಾರ 59,339 ಪ್ರಕರಣ ಉಳಿಸಿ ಹೋಗಿತ್ತು. ಇವುಗಳ ಇತ್ಯರ್ಥಕ್ಕಾಗಿ ನಮ್ಮ ಸರ್ಕಾರ 18 ವಿಶೇಷ ಉಪ ವಿಭಾಗಾಧಿಕಾರಿಗಳ ನೇಮಕ ಮಾಡಿದ್ದು, ಇದೀಗ ಶೇಕಡ 70ರಷ್ಟು ಹಳೆಯ ಪ್ರಕರಣಗಳು ಕಳೆದ ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.