ಫಿಟ್ನೆಸ್‌ಗೆ ಮತ್ತೊಂದು ಹೆಸರಾಗಿರುವ ಮಿಲಿಂದ್ ಸೋಮನ್‌ರ ಪತ್ನಿ ಅಂಕಿತಾ ಕನ್ವರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜೀವನದ ಕಹಿ ಕಾಲಘಟ್ಟವೊಂದರ ಬಗ್ಗೆ ಹೇಳಿಕೊಂಡಿದ್ದಾರೆ.
ಮಗುವಾಗಿದ್ದ ವೇಳೆ ತಾವು ಬಹಳ ಚಿತ್ರಹಿಂಸೆ ಅನುಭವಿಸಿದ್ದು, ಜನರಿಂದ ಮೋಸ ಹೋಗಿದ್ದಲ್ಲದೇ ತಮ್ಮ ತಂದೆ ಹಾಗೂ ಮಾಜಿ ಪ್ರಿಯಕರನನ್ನು ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಕೊರೊನಾ ಗೆಲ್ಲಲು ನಟನಿಗೆ ನೆರವಾಯ್ತಂತೆ ಈ ‘ಕಷಾಯ’
“ಮಗುವಾಗಿ ಚಿತ್ರಹಿಂಸೆ ಅನುಭವಿಸಿ, ಹಾಸ್ಟೆಲ್‌ಗಳಲ್ಲಿ ಬೆಳೆದು, ವಿದೇಶದ ನಗರಗಳಲ್ಲಿ ಒಬ್ಬಳೇ ಬದುಕಿ, ನಾನು ನಂಬಿದ ಜನರಿಂದಲೇ ಮೋಸ ಹೋಗಿದ್ದೇನೆ. ಒಬ್ಬ ಸಹೋದರನನ್ನು ಕಳೆದುಕೊಂಡಿದ್ದು, ಪ್ರಿಯಕರ ಹಾಗೂ ತಂದೆಯನ್ನು ಕಳೆದುಕೊಂಡಿರುವೆ. ನಾನು ಕಾಣುವ ರೀತಿಗಾಗಿ ಹಾಗೂ ನನ್ನ ಇಚ್ಛೆಯ ವ್ಯಕ್ತಿಯೊಂದಿಗೆ ಇರುವ ಕಾರಣಕ್ಕೆ ಜನರಿಂದ ಏನೇನೋ ಕರೆಯಿಸಿಕೊಂಡು, ಅನ್ನಿಸಿಕೊಂಡಿದ್ದೇನೆ. ನೀವು ನನ್ನನ್ನು ಆಶಾವಾದಿಯಾಗಿ ಕಾಣುವುದಾದರೆ, ನಿಮಗೆ ನಾನು ಏನೆಂದು ಗೊತ್ತಿರಲಿ! ನಿಮ್ಮನ್ನು ನೀವು ಪ್ರೀತಿಸಿಕೊಳ್ಳಿ,” ಎಂದು ಅಂಕಿತಾ ಬರೆದುಕೊಂಡಿದ್ದಾರೆ.
ಪತಿ ಮಿಲಿಂದ್ ಸೋಮನ್‌ರಿಂದ ಅಂಕಿತಾರ ಈ ಪೋಸ್ಟ್‌ಗೆ ಲವ್ ಎಮೋಜಿ ಸಿಕ್ಕಿದ್ದು, ಅಭಿಮಾನಿಗಳು ಹಾಗೂ ಸ್ನೇಹಿತರು ಸಹ ಭಾವಪರವಶರಾಗಿ ಪ್ರತಿಕ್ರಿಯಿಸಿದ್ದಾರೆ.
https://www.youtube.com/shorts/LbAb5Cy_pgQ?feature=share