alex Certify ಲೈಂಗಿಕತೆಯಿಂದ ದೂರವಿದ್ದು ಒಂದು ತಿಂಗಳು ಅನುಸರಿಸಿ ಬ್ರಹ್ಮಚರ್ಯದ ನಿಯಮ; ಅದರಿಂದಾಗುತ್ತೆ ಅಚ್ಚರಿಯ ಬದಲಾವಣೆ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕತೆಯಿಂದ ದೂರವಿದ್ದು ಒಂದು ತಿಂಗಳು ಅನುಸರಿಸಿ ಬ್ರಹ್ಮಚರ್ಯದ ನಿಯಮ; ಅದರಿಂದಾಗುತ್ತೆ ಅಚ್ಚರಿಯ ಬದಲಾವಣೆ……!

ಲೈಂಗಿಕ ಜೀವನ ಅತ್ಯಂತ ವೈಯಕ್ತಿಕವಾದ ವಿಷಯ. ಯಾರೊಂದಿಗೆ ಮತ್ತು ಹೇಗೆ ಸಂಬಂಧ ಬೆಳೆಸಬೇಕು ಎಂಬ ನಿರ್ಧಾರ ಕೂಡ  ಸಂಪೂರ್ಣವಾಗಿ ವೈಯಕ್ತಿಕವಾಗಿದೆ. ಕೆಲವರು ಲೈಂಗಿಕ ಜೀವನವನ್ನು ಪೂರ್ತಿಯಾಗಿ ಆನಂದಿಸಿದರೆ ಇನ್ನು ಕೆಲವರು ಎಲ್ಲಾ ರೀತಿಯ ಲೈಂಗಿಕ ಚಟುವಟಿಕೆಗಳಿಂದ ದೂರವಿರಲು ನಿರ್ಧರಿಸುತ್ತಾರೆ. ಎರಡೂ ಆಯ್ಕೆಗಳು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ.

ಲೈಂಗಿಕ ಬದುಕಿನಿಂದ ದೂರವಾಗಿ ಬ್ರಹ್ಮಚಾರಿಯಾಗಿ ಉಳಿಯುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಬ್ರಹ್ಮಚರ್ಯವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ಲೈಂಗಿಕತೆಯು ವ್ಯಾಕುಲತೆ ಎಂಬ ಭಾವನೆ ಬರುತ್ತದೆ. ಅದರಿಂದ ದೂರವನ್ನು ಕಾಯ್ದುಕೊಳ್ಳುವುದರಿಂದ ಅವರ ಮನಸ್ಸು ಹೆಚ್ಚು ಸ್ಪಷ್ಟವಾಗಿರುತ್ತದೆ ಮತ್ತು ಕೇಂದ್ರೀಕೃತವಾಗಿರುತ್ತದೆ. ಬ್ರಹ್ಮಚಾರಿಗಳ ಪ್ರಕಾರ ಲೈಂಗಿಕತೆ ಅವರಿಗೆ ಒತ್ತಡವನ್ನುಂಟುಮಾಡುತ್ತದೆ, ಅದರ ಬಗ್ಗೆ ಯೋಚಿಸದಿದ್ದಾಗ ಅವರು ಸಂತೋಷವಾಗಿರುತ್ತಾರೆ.

ಬ್ರಹ್ಮಚರ್ಯ ಎಂದರೇನು?

ಬ್ರಹ್ಮಚಾರಿಯಾಗಿರುವುದು ಎಂದರೆ ಸಂಭೋಗ ಮಾಡದಿರುವುದು ಎಂದರ್ಥ. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ವಿಭಿನ್ನವಾಗಿ ವ್ಯಾಖ್ಯಾನಿಸುತ್ತಾರೆ. ಕೆಲವರು ಎಲ್ಲಾ ರೀತಿಯ ಲೈಂಗಿಕ ಚಟುವಟಿಕೆಗಳಿಂದ ದೂರವಿರುತ್ತಾರೆ, ಉದಾಹರಣೆಗೆ ಅವರು ಚುಂಬನದಲ್ಲೂ ಪಾಲ್ಗೊಳ್ಳುವುದಿಲ್ಲ, ಕೈ ಹಿಡಿಯುವುದೂ ಇಲ್ಲ. ಆದರೆ ಕೆಲವರು ಬ್ರಹ್ಮಚರ್ಯದ ನಿಯಮಗಳಲ್ಲಿ ಸಂಭೋಗವನ್ನು ಮಾತ್ರ ಸೇರಿಸುತ್ತಾರೆ ಮತ್ತು ಲೈಂಗಿಕ ಬಯಕೆಗಳನ್ನು ಪೂರೈಸಲು ಹಸ್ತಮೈಥುನ ಮಾಡುತ್ತಾರೆ. ಆದರೆ ಕೆಲವರು ಇದನ್ನು ಸಹ ಮಾಡುವುದಿಲ್ಲ. ಬ್ರಹ್ಮಚರ್ಯದಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ವಿವರವಾಗಿ ನೋಡೋಣ.

ಲೈಂಗಿಕ ಸಂಭೋಗದ ಸಮಯದಲ್ಲಿ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ರೋಗಗಳ ಅಪಾಯವಿರುತ್ತದೆ. ಆದರೆ ಬ್ರಹ್ಮಚಾರಿಯಾಗಿ ಉಳಿದರೆ ಈ ಸಮಸ್ಯೆಗಳಿರುವುದಿಲ್ಲ. ಕೆಲವರು ಸಂಭೋಗದಿಂದ ದೂರ ಉಳಿದು ಕೇವಲ ಚುಂಬನ ಅಥವಾ ಅಪ್ಪುಗೆಯಂತಹ ಲೈಂಗಿಕ ಚಟುವಟಿಕೆಗಳಿಗೆ ಸೀಮಿತವಾಗಿರುತ್ತಾರೆ.

ಬ್ರಹ್ಮಚರ್ಯ ಪಾಲಿಸುವುದರಿಂದ ವ್ಯಕ್ತಿಯ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತದೆ. ಇದು ಅವರ ಆಧ್ಯಾತ್ಮಿಕ ನಂಬಿಕೆಯನ್ನು ಬಲಪಡಿಸುತ್ತದೆ.

ಅಷ್ಟೇ ಅಲ್ಲ ಲೈಂಗಿಕತೆಯಿಂದ ದೂರವಿದ್ದಾಗ ಮನಸ್ಸಿನಲ್ಲಿ ಸ್ಪಷ್ಟತೆ ಹೆಚ್ಚುತ್ತದೆ. ಅವರು ಅಧ್ಯಯನ ಅಥವಾ ಕಚೇರಿ ಕೆಲಸದ ಮೇಲೆ ಹೆಚ್ಚು ಗಮನಹರಿಸಬಹುದು. ಬ್ರಹ್ಮಚಾರಿಯಾಗಿರುವುದರಿಂದ ಅವರು ಲೈಂಗಿಕ ಸಂಬಂಧಗಳ ಬಗ್ಗೆ ಯೋಚಿಸುವುದಿಲ್ಲ. ತಮ್ಮ ಎಲ್ಲಾ ಶಕ್ತಿಯನ್ನು ಅಧ್ಯಯನ ಅಥವಾ ಕೆಲಸಕ್ಕೆ ವಿನಿಯೋಗಿಸುತ್ತಾರೆ, ಇದು ಅವರ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಜೀವನದಲ್ಲಿ ಆಘಾತವನ್ನು ಅನುಭವಿಸಿದ ಅಥವಾ ತುಂಬಾ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರಿಗೆ ಬ್ರಹ್ಮಚರ್ಯದ ನಿಯಮಗಳು ಚಿಕಿತ್ಸೆಯಿದ್ದಂತೆ. ಲೈಂಗಿಕ ಸಂಬಂಧಗಳಿಂದ ದೂರವಿರುವವರಿಗೆ ಖರ್ಚು ಕಡಿಮೆ. ಕಾಂಡೋಮ್ ಅಥವಾ ಜನನ ನಿಯಂತ್ರಣ ಮಾತ್ರೆಗಳಂತಹ ಗರ್ಭನಿರೋಧಕಗಳನ್ನು ಖರೀದಿಸುವ ಅಗತ್ಯವಿಲ್ಲ.

ಆದರೆ ಬ್ರಹ್ಮಚರ್ಯದ ತತ್ವಗಳು ಎಲ್ಲರಿಗೂ ಅನ್ವಯಿಸುವುದಿಲ್ಲ. ಕೆಲವರು ಇದನ್ನು ಆಯ್ಕೆ ಮಾಡಿಕೊಂಡ ಬಳಿಕ ತುಂಬಾ ದುಃಖಿತರಾಗುತ್ತಾರೆ. ಏಕೆಂದರೆ ಅವರು ದೈಹಿಕ ಆನಂದವನ್ನು ಕಳೆದುಕೊಳ್ಳುತ್ತಾರೆ, ಒಂಟಿತನವನ್ನು ಅನುಭವಿಸುತ್ತಾರೆ. ಈ ಕಾರಣದಿಂದಾಗಿ ಕೆಲವರು ಆತಂಕ ಮತ್ತು ಖಿನ್ನತೆಯನ್ನು ಸಹ ಅನುಭವಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...