ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಜನರು ಹಬ್ಬದ ಸಡಗರದಲ್ಲಿದ್ದಾರೆ. ಆದರೆ ಸರ್ಕಾರಿ ಕಚೇರಿ, ಬ್ಯಾಂಕ್ ಗಳಲ್ಲಿ ನೌಕರರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ರಜೆ ಹಾಕಿದ್ದರಿಂದ ಸಾರ್ವಜನಿಕರು ಪರದಾಡಿದರು.
ದೀಪಾವಳಿ ಹಬ್ಬದ ಸರ್ಕಾರಿ ರಜೆ ನಾಳೆಗೆ (ನ.14 ) ಕ್ಕೆ ಬಂದಿದ್ದು, ಹಬ್ಬ (ನ.13) ಕ್ಕೆ ಇಂದು ಬಂದಿದೆ. ಆದ್ದರಿಂದ ಇಂದು ಹಬ್ಬ ಆಚರಿಸಲು ಬಹುತೇಕ ಸರ್ಕಾರಿ ನೌಕರರು ಇಂದು ರಜೆ ಹಾಕಿದ್ದಾರೆ. ಹಲವು ಕಚೇರಿ, ಬ್ಯಾಂಕ್ ಗಳಲ್ಲಿ ಕೆಲವೇ ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾದ ದೃಶ್ಯಗಳು ಕಂಡು ಬಂದಿತು.
ಬಹುತೇಕ ಕಚೇರಿಗಳು ಇಂದು ತೆರೆದಿದ್ದರೂ ನೌಕರರಿಲ್ಲದೇ ಬಿಕೋ ಎನ್ನುತ್ತಿತ್ತು.ವೀಕೆಂಡ್ ಹಿನ್ನೆಲೆ ಸಾಲು ಸಾಲು ರಜೆ ಹಿನ್ನೆಲೆ ಬಹುತೇಕ ನೌಕರರು ಸೋಮವಾರ ಕೂಡ ರಜೆ ಹಾಕಿದ್ದಾರೆ. ಈ ಹಿನ್ನೆಲೆ ತಮ್ಮ ತಮ್ಮ ಕೆಲಸ ಮುಗಿಸಿಕೊಳ್ಳಲು ಕಚೇರಿ, ಬ್ಯಾಂಕ್ ಗಳಿಗೆ ಹೋದ ಜನರು ಪರದಾಡಿದ್ದಾರೆ. ಕೆಲವರು ವಾಪಸ್ ಕೂಡ ಬಂದಿದ್ದಾರೆ.
ಕೆಲವು ರಾಜ್ಯದಲ್ಲಿ ದೀಪಾವಳಿ ರಜೆಗೆ ಸಂಬಂಧಿಸಿದಂತೆ ಸರ್ಕಾರ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ಘೋಷಿಸಿದ್ದ ರಜೆಯನ್ನು ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ನವೆಂಬರ್ 12 ರಂದು ದೀಪಾವಳಿ ರಜೆ ಘೋಷಿಸಲಾಗಿತ್ತು. ನಂತರ ಅದನ್ನು ನವೆಂಬರ್ 13ಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ