ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಎಬಿಬಿ, –ಸಿ ಮೋಟರ್ ನಿಂದ ಮತದಾರರ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಮತದಾರರು ನೀಡಿದ ಮಾಹಿತಿಯಂತೆ ಟಿಎಂಸಿ ಅಧಿಕಾರದಲ್ಲಿ ಮುಂದುವರೆಯಲಿದೆ. ಎಬಿಪಿ, ಸಿ -ವೋಟರ್ ಸಮೀಕ್ಷೆಯಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕಳೆದ ಚುನಾವಣೆಗಿಂತ ಬಿಜೆಪಿ 109 ಸ್ಥಾನಗಳನ್ನು ಹೆಚ್ಚು ಗಳಿಸಿದರೂ ಕೂಡ ಅಧಿಕಾರಕ್ಕೇರುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
294 ಸದಸ್ಯ ಬಲದ ಪಶ್ಚಿಮಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ 160, ಬಿಜೆಪಿ 109, ಕಾಂಗ್ರೆಸ್ -ಎಡರಂಗ ಮೈತ್ರಿಕೂಟ 22 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.
ಕಳೆದ ಚುನಾವಣೆಯಲ್ಲಿ ಟಿಎಂಸಿ 211 ಸ್ಥಾನಗಳಿಸಿದ್ದು, ಬಿಜೆಪಿ 3 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ -ಎಡರಂಗ 76 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಇತರರು 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಈ ಬಾರಿ ಮತ್ತೆ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಶೇಕಡವಾರು ಮತದಾನದಲ್ಲಿ ಟಿಎಂಸಿ ಶೇಕಡ 42.1, ಬಿಜೆಪಿ ಶೇಕಡ 37.4, ಕಾಂಗ್ರೆಸ್ ಎಡರಂಗ ಶೇಕಡ 13.5 ರಷ್ಟು ಮತಗಳಿಸುವ ಸಾಧ್ಯತೆ ಇದೆ.