ಮುಂದಿನ 12 ತಿಂಗಳ ಅವಧಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರಾಟದಲ್ಲಿ ಭಾರೀ ಬೇಡಿಕೆ ಮೂಡಿ ಬರುವ ಸಾಧ್ಯತೆಗಳು ನಿಚ್ಚಳವಾಗುತ್ತಿರುವಂತೆ, ದೇಶವಾಸಿಗಳ ಪೈಕಿ 90% ಜನರ ಇವಿ ವಾಹನ ಖರೀದಿ ಮಾಡಲು ದೊಡ್ಡ ಮೊತ್ತ ತೆರಲು ಸಿದ್ಧರಾಗಿದ್ದಾರೆ ಎಂದು ಕನಲ್ಟೆನ್ಸಿ ಸಂಸ್ಥೆ ಇವೈ ತಿಳಿಸಿದೆ.
ಇವೈನ ಮೊಬಿಲಿಟಿ ಕನ್ಸ್ಯೂಮರ್ ಸೂಚ್ಯಂಕ (ಎಂಸಿಐ) 13 ದೇಶಗಳಿಂದ 9000ಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದ್ದು, ಇವರ ಪೈಕಿ ಭಾರತದಿಂದ 1000 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ನಿಮಗೆ ಗೊತ್ತಾ ಕರಿಬೇವಿನಲ್ಲಿರುವ ಔಷಧೀಯ ಗುಣ…..?
“ಸಮೀಕ್ಷೆ ನಡೆಸಿದ ಮಂದಿಯ ಪೈಕಿ 40% ಮಂದಿ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ 20%ನಷ್ಟು ಹೆಚ್ಚು ಹಣ ಪಾವತಿ ಮಾಡಲು ಸಿದ್ಧರಿದ್ದಾರೆ. ಭಾರತದಲ್ಲಿ ಕಾರು ಖರೀದಿ ಮಾಡುವ ಮಂದಿಯಲ್ಲಿ 10ರಲ್ಲಿ 3 ಮಂದಿ ಎಲೆಕ್ಟ್ರಿಕ್/ಜಲಜನಕ ಚಾಲಿತ ವಾಹನ ಖರೀದಿ ಮಾಡಲು ಇಚ್ಛಿಸುತ್ತಾರೆ” ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಸಮೀಕ್ಷೆ ನಡೆಸಿದ ಭಾರತೀಯರ ಪೈಕಿ ಹೆಚ್ಚಿನ ಮಂದಿ, ಒಮ್ಮೆ ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಮಾಡಿದ ಮೇಲೆ 100-200 ಮೈಲುಗಳಷ್ಟು ದೂರ ಸಂಚರಿಸುವ ವಾಹನಗಳನ್ನು ಖರೀದಿ ಮಾಡಲು ಇಚ್ಛಿಸುವುದಾಗಿ ಇವೈ ತಿಳಿಸಿದೆ.