
ಬೆಂಗಳೂರು: ಗರ್ಭಪಾತದ ಮಾತ್ರೆ ಸೇವಿಸಿ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬೇಗೂರಿನನಲ್ಲಿ ಘಟನೆ ನಡೆದಿದೆ.
ಗಂಡನಿಗೆ ತಿಳಿಸದೆ ಗರ್ಭಪಾತದ ಮಾತ್ರೆ ಸೇವಿಸಿದ ಮಹಿಳೆಗೆ 11 ತಿಂಗಳ ಗಂಡು ಮಗು ಇದೆ. ಇತ್ತೀಚೆಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ್ದ ಅವರು ಪ್ರೆಗ್ನೆಂಟ್ ಆಗಿರುವುದನ್ನು ಪತಿಗೆ ತಿಳಿಸಿದ್ದಾರೆ. ವೈದ್ಯರ ಸಲಹೆ ಪಡೆಯೋಣ ಎಂದು ಪತಿ ಹೇಳಿದ್ದು, ಇದಕ್ಕೆ ಒಪ್ಪದ ಪತ್ನಿ ಗಂಡನಿಗೆ ತಿಳಿಸದೆ ಗರ್ಭಪಾತದ ಮಾತ್ರೆ ತೆಗೆದುಕೊಂಡಿದ್ದಾರೆ.
ತೀವ್ರ ರಕ್ತಸ್ರಾವವಾಗುತ್ತಿದ್ದಂತೆ ಪತಿಗೆ ಕರೆ ಮಾಡಿ ವಿಷಯ ಹೇಳಿದ್ದಾರೆ. ಕೂಡಲೇ ಪತ್ನಿಯನ್ನು ಪತಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಅವರು ಸಾವನ್ನಪ್ಪಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಆಕೆಯ ಸಹೋದರ ಬೇಗೂರು ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಬೇಗೂರು ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.