ವಿಶೇಷ ಪ್ರಕರಣಗಳಲ್ಲಿ ಮಹಿಳೆಯರಿಗೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ವೈದ್ಯಕೀಯ ಗರ್ಭಪಾತ ( ತಿದ್ದುಪಡಿ) 2021ರ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.
ಈ ಹೊಸ ನಿಯಮದ ಪ್ರಕಾರ, 7 ವರ್ಗಗಳ ಅಡಿಯಲ್ಲಿ ಬರುವ ಮಹಿಳೆಯರಿಗೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಗಳಿಗೆ ಏರಿಕೆ ಮಾಡಲಾಗಿದೆ. ಅತ್ಯಾಚಾರಕ್ಕೊಳಗಾದ ಅಪ್ರಾಪ್ತರು, ಗರ್ಭಾವಸ್ಥೆಯ ಸಂದರ್ಭದಲ್ಲಿ ವಿಧವೆ ಇಲ್ಲವೇ ವಿಚ್ಛೇದನಗೊಳಪಟ್ಟಲ್ಲಿ, ಅಂಗವಿಕಲೆ, ಮಾನಸಿಕ ಅಸ್ವಸ್ಥೆಗೆ, ಗರ್ಭದಲ್ಲಿರುವ ಮಗು ದೈಹಿಕವಾಗಿ ಅಥವಾ ಮಾನಸಿಕವಾಗಿ ಕಾಯಿಲೆಯನ್ನು ಹೊಂದಿದ್ದಲ್ಲಿ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ಏರಿಕೆ ಮಾಡಲಾಗಿದೆ.
OMG ! ಬೆಚ್ಚಿಬೀಳಿಸುವಂತಿದೆ ಮಹಿಳೆ ಮಲಗಿದ್ದಾಗ ನಡೆದಿರುವ ಈ ಘಟನೆ
ಈ ಹಿಂದೆ 12 ವಾರಗಳಲ್ಲಿ ಗರ್ಭಪಾತ ಮಾಡಲು ಇಚ್ಛಿಸಿದಲ್ಲಿ ಒಬ್ಬ ವೈದ್ಯರ ಸಲಹೆ ಹಾಗೂ 12 ರಿಂದ 20 ವಾರಗಳ ಅವಧಿಯಲ್ಲಿ ಇಬ್ಬರು ವೈದ್ಯರ ಸಲಹೆಯನ್ನು ಪಡೆಯಬೇಕಿತ್ತು. ಆದರೆ ಪ್ರಸ್ತುತ ನಿಯಮದ ಪ್ರಕಾರ, ಈ ಅವಧಿಯನ್ನು ಮೀರಿದ ಗರ್ಭಿಣಿಯರು ಗರ್ಭಪಾತ ಮಾಡಿಸಲು ಇಚ್ಛಿಸಿದಲ್ಲಿ ರಾಜ್ಯ ಮಟ್ಟದ ವೈದ್ಯಕೀಯ ಮಂಡಳಿ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದೆ.
ವೈದ್ಯಕೀಯ ಮಂಡಳಿಯು ಮಹಿಳೆಯ ಸುರಕ್ಷತೆಯನ್ನು ಗಮನದಲ್ಲಿರಿಸಿಯೇ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಈ ನಿಯಮ ಹೇಳಿದೆ.