ನಿನ್ನೆ ನಡೆದ ವಿವೋ ಪ್ರೋ ಕಬ್ಬಡಿಯ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪೂರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಜಯ ಸಾಧಿಸುವ ಮೂಲಕ ಸೀಸನ್ 9ರ ಟ್ರೋಫಿ ಎತ್ತಿಹಿಡಿದಿದೆ.
ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಹಾಗೂ ಅವರ ಪುತ್ರಿ ಆರಾಧ್ಯ ಸೇರಿದಂತೆ ಪುಣೇರಿ ಪಲ್ಟಾನ್ ನ ಸಪೋರ್ಟ್ ಮಾಡಲು ರಣವೀರ್ ಸಿಂಗ್ ಪೂಜಾ ಹೆಗ್ಡೆ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಆಗಮಿಸಿದ್ದರು, ಈ ರೋಮಾಂಚನಕಾರಿ ಪಂದ್ಯದಲ್ಲಿ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಸುನಿಲ್ ಕುಮಾರ್ 5 ಸೂಪರ್ ಟ್ಯಾಕಲ್ ಮಾಡಿದರೆ ಕೆ. ಅಭಿಷೇಕ್ 3 ಹಾಗೂ ಸಾಹುಲ್ ಕುಮಾರ್ 3 ಟ್ಯಾಕಲ್ ಮಾಡುವ ಮೂಲಕ ಪಂದ್ಯದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇವಲ 4 ಅಂಕಗಳಿಂದ ಪುಣೇರಿ ಪಲ್ಟಾನ್ ಸೋಲನ್ನನುಭವಿಸಿದ್ದು, ಪುಣೇರಿ ಪಲ್ಟಾನ್ ನ ನಾಯಕ ಫಝೆಲ್ ಸುಲ್ತಾನ್ ಅಟ್ರಾಚಾಲಿ ಅವರಿಗೆ ತುಂಬಾ ಬೇಸರವಾಗಿದೆ. 8 ವರ್ಷಗಳ ಬಳಿಕ ಜೈಪುರ್ ಪಿಂಕ್ ಪ್ಯಾಂಥರ್ಸ್ ಕಬ್ಬಡಿಯ ವಿಜೇತರಾಗಿದ್ದು, ಅಭಿಷೇಕ್ ಬಚ್ಚನ್ ಸಂಭ್ರಮಿಸಿದ್ದಾರೆ.