ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡೈವೋರ್ಸ್ ವದಂತಿಗೆ ತೆರೆ ಬಿದ್ದಿದ್ದು, ಒಟ್ಟಿಗೆ ಕಾಣಿಸಿಕೊಂಡ ದಂಪತಿಗಳ ಫೋಟೋ ವೈರಲ್ ಆಗಿದೆ.
ಪಾರ್ಟಿಯೊಂದರಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದು, ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಜೋಡಿಯ ಕ್ಷಣವನ್ನು ಚಲನಚಿತ್ರ ನಿರ್ಮಾಪಕ ಅನು ರಂಜನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಮಿತಾಬ್ ಪುತ್ರ ಅಭಿಷೇಕ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ. ಇದರ ನಡುವೆ ಈ ಫೋಟೋ ವದಂತಿಗೆ ತೆರೆ ಎಳೆದಿದೆ.