
ಲಾರೆನ್ಸ್ ಬಿಷ್ಣೋಯಿ ಸಹಚರರು ಎನ್ನಲಾದ ಕೆಲವರು ಮೊದಲಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದು, ಇದನ್ನು ಅಭಿನವ್ ಅರೋರಾ ಕುಟುಂಬ ಸ್ವೀಕರಿಸಿರಲಿಲ್ಲ. ಮರುದಿನ ಅದೇ ನಂಬರ್ ನಿಂದ ಜೀವ ಬೆದರಿಕೆಯ ಸಂದೇಶವನ್ನು ಕಳುಹಿಸಲಾಗಿದೆ.
ಈ ಕುರಿತು ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಅಭಿನವ್ ಅರೋರಾ ತಾಯಿ, ತಮ್ಮ ಪುತ್ರ ಆಧ್ಯಾತ್ಮಿಕ ವಿಷಯಗಳ ಕುರಿತು ಆಸಕ್ತಿ ಹೊಂದಿದ್ದು, ಹೀಗಾಗಿ ಅವುಗಳ ವಿಡಿಯೋ ಮಾಡಿ ಹಂಚಿಕೊಳ್ಳುತ್ತಾನೆ. ಬೆದರಿಕೆ ಎದುರಿಸುವಷ್ಟು ತಪ್ಪನ್ನು ಆತ ಮಾಡಿಲ್ಲ ಎಂದು ಹೇಳಿದ್ದಾರೆ.
ಅಭಿನವ್ ಅರೋರಾ ಈ ಹಿಂದೆ ಸ್ವಾಮಿ ರಾಮಭದ್ರಾಚಾರ್ಯ ಅವರ ಕಾರ್ಯಕ್ರಮದ ವೇದಿಕೆ ಮೇಲಿದ್ದಾಗ ಗಾಂಭೀರ್ಯತೆಯನ್ನು ಮರೆತು ಘೋಷಣೆ ಕೂಗಿದ್ದ. ಆ ಸಂದರ್ಭದಲ್ಲಿ ಸ್ವಾಮೀಜಿಯವರು ಅಭಿನವ್ ಗೆ ಛೀಮಾರಿ ಹಾಕಿದ್ದರು. 2023ರಲ್ಲಿ ನಡೆದಿದ್ದ ಈ ಘಟನೆಯ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಅಭಿನವ್ ಮುನ್ನೆಲೆಗೆ ಬರುವಂತೆ ಮಾಡಿತ್ತು.
ಈ ಕುರಿತಂತೆ ಪ್ರತಿಕ್ರಿಯಿಸಿದ ಅಭಿನವ್ ಅರೋರಾ ತಾಯಿ, ತಮ್ಮ ಮಗ ಆಧ್ಯಾತ್ಮ ವಿಷಯಗಳು ಬಂದಾಗ ಮೈ ಮರೆತು ಬಿಡುತ್ತಾನೆ. ಸ್ವಾಮಿ ರಾಮಭದ್ರಾಚಾರ್ಯರು ಅಂದು ವೇದಿಕೆ ಮೇಲೆ ಆತನಿಗೆ ಬೈದರೂ ಸಹ ಬಳಿಕ ಆಶೀರ್ವದಿಸಿದ್ದರು. ಹಿರಿಯರು ಬೈದರೂ ಸಹ ಅದು ಆಶೀರ್ವಾದವಿದ್ದಂತೆ ಎಂದು ಸಮರ್ಥಿಸಿಕೊಂಡಿದ್ದಾರೆ.