ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಿಂಗಳಲ್ಲಿ 5 ದಿನಗಳ ಕಾಲ ಮಹಿಳೆಯರು ಸಾಕಷ್ಟು ನೋವು ಅನುಭವಿಸುತ್ತಾರೆ. ವಿಪರೀತ ರಕ್ತಸ್ರಾವ, ಹೊಟ್ಟೆ ಮತ್ತು ಕಾಲುಗಳಲ್ಲಿ ನೋವು, ಸೆಳೆತ ಇವೆಲ್ಲವೂ ಮುಟ್ಟಿನ ಸಮಯದಲ್ಲಿ ಸಾಮಾನ್ಯ. ಮುಟ್ಟಿನ ಸಮಯದಲ್ಲಿ ಅಂಡಾಶಯಗಳ ಮೇಲೆ ಸಂಗ್ರಹವಾಗುವ ಮೊಟ್ಟೆಗಳ ಪದರವು ಬಿಡುಗಡೆಯಾಗುತ್ತದೆ.
ಋತುಚಕ್ರದಲ್ಲಿ ವಿಪರೀತ ರಕ್ತಸ್ರಾವಕ್ಕೆ ಹುಳಿ ಆಹಾರದ ಸೇವನೆ ಕಾರಣ ಎಂದು ಹೇಳಲಾಗುತ್ತದೆ. ಆದರೆ ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಪಿರಿಯಡ್ಸ್ ಸಮಯದಲ್ಲಿ 4-5 ದಿನಗಳವರೆಗೆ ಹುಳಿ ತಿನ್ನಬಾರದು ಎಂದು ಹಿರಿಯರು ಸಹ ಹೇಳುತ್ತಾರೆ. ಏಕೆಂದರೆ ಆಗ ಹೊಟ್ಟೆ ನೋವು ಸಹ ಇರುತ್ತದೆ. ಹುಳಿ ಆಹಾರವನ್ನು ಸೇವಿಸುವುದರಿಂದ ಭಾರೀ ರಕ್ತಸ್ರಾವವಾಗುತ್ತದೆ ಎಂದು ನಂಬಲಾಗಿದೆ. ಇದು ಬಹಳ ಹಿಂದಿನಿಂದಲೂ ಇರುವ ಸಾಮಾನ್ಯ ನಂಬಿಕೆ.
ಪಿರಿಯಡ್ಸ್ ಸಮಯದಲ್ಲಿ ಉಪ್ಪಿನಕಾಯಿ, ನಿಂಬೆಹಣ್ಣು ಮತ್ತು ಋತುಮಾನದ ಹಣ್ಣುಗಳನ್ನು ತಿನ್ನಬಾರದು ಎಂದು ನಂಬಲಾಗಿದೆ. ಆದರೆ ಆರೋಗ್ಯ ತಜ್ಞರ ಪ್ರಕಾರ ನಾವು ದೈನಂದಿನ ಜೀವನದಲ್ಲಿ ಸೇವಿಸುವ ಆಹಾರ ಮುಟ್ಟಿನ ಸಮಯದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿ ಪಿರಿಯಡ್ಸ್‌ನಲ್ಲಿ ಮಾತ್ರವಲ್ಲದೆ ದಿನನಿತ್ಯ ಕೂಡ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಆದರೆ ಋತುಚಕ್ರದ ಸಮಯದಲ್ಲಿ ಹುಳಿ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ನೋವು ಮತ್ತು ಭಾರೀ ರಕ್ತಸ್ರಾವವಾಗುತ್ತದೆ ಎಂಬುದು ತಪ್ಪು ತಿಳುವಳಿಕೆ. ಗರ್ಭಾಶಯಕ್ಕೆ ಯಾವುದೇ ಆಹಾರದ ರುಚಿ ತಿಳಿದಿಲ್ಲ.
ಅಂಡಾಶಯಕ್ಕೆ ನಾವು ತಿನ್ನುವ ಆಹಾರ ಮಸಾಲೆ ಅಥವಾ ಸಿಹಿ ಎಂದು ತಿಳಿದಿರುವುದಿಲ್ಲ. ಇದು ಹಾರ್ಮೋನುಗಳ ಕಾರಣದಿಂದ ಸಂಭವಿಸುತ್ತದೆ. ಆರೋಗ್ಯಕರ ಆಹಾರವನ್ನು ಸೇವಿಸಿದರೆ ಮತ್ತು ಉತ್ತಮ ಜೀವನಶೈಲಿಯನ್ನು ಹೊಂದಿದ್ದರೆ ಮುಟ್ಟಿನ ಸಮಯದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಆರೋಗ್ಯಕರ ಆಹಾರ ಸೇವನೆಯಿಂದ ದೇಹದಲ್ಲಿ ರಕ್ತದ ಕೊರತೆಯಾಗುವುದಿಲ್ಲ. ದೌರ್ಬಲ್ಯವಿಲ್ಲದಿದ್ದರೆ ನೋವು ಸಹ ಕಡಿಮೆ ಇರುತ್ತದೆ.
ಉಪ್ಪಿನಕಾಯಿ ಮತ್ತು ಹುಳಿ ಆಹಾರಗಳಲ್ಲಿ ಮಸಾಲೆ, ಆಮ್ಲವಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಮುಟ್ಟಿನ ಸಮಯದಲ್ಲಿ ಜೀರ್ಣಾಂಗ ವ್ಯವಸ್ಥೆಯು ಸೂಕ್ಷ್ಮವಾಗಿರುವುದರಿಂದ ಹುಳಿ ಆಹಾರಗಳ ಸೇವನೆ ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ದಿನಗಳಲ್ಲಿ ಹುಳಿ ಮತ್ತು ಮಸಾಲೆಯುಕ್ತ ಆಹಾರವನ್ನು ತ್ಯಜಿಸುವುದು ಉತ್ತಮ.
ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಮೊಡವೆಗಳಾಗಬಹುದು. ಉಪ್ಪಿನಕಾಯಿಯಂತಹ ಆಹಾರದಲ್ಲಿ ಮಸಾಲೆ ಜಾಸ್ತಿ ಇರುವುದರಿಂದ ಈ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಚರ್ಮವು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿರಬೇಕೆಂದರೆ ಮುಟ್ಟಿನ ಸಮಯದಲ್ಲಿ ಇವುಗಳನ್ನು ತ್ಯಜಿಸುವುದು ಉತ್ತಮ.