alex Certify ರಾತ್ರಿ ಊಟದಲ್ಲಿ ಈ ನಿಯಮ ಪಾಲಿಸಿದ್ರೆ ಸುಲಭವಾಗಿ ಕರಗಿಸಬಹುದು ಹೊಟ್ಟೆ ಕೊಬ್ಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಊಟದಲ್ಲಿ ಈ ನಿಯಮ ಪಾಲಿಸಿದ್ರೆ ಸುಲಭವಾಗಿ ಕರಗಿಸಬಹುದು ಹೊಟ್ಟೆ ಕೊಬ್ಬು

ಹೊಟ್ಟೆಯ ಕೊಬ್ಬು ಅಥವಾ ಬೊಜ್ಜು ಎಲ್ಲರನ್ನೂ ಮುಜುಗರಕ್ಕೀಡುಮಾಡುವಂಥ ಸಮಸ್ಯೆ. ನಮ್ಮ ಸೌಂದರ್ಯವನ್ನೇ ಈ ಬೊಜ್ಜು ಹಾಳು ಮಾಡುತ್ತದೆ. ಹೊಟ್ಟೆಯ ಕೊಬ್ಬು ಕರಗಿಸಲು ಜನರು ವಿವಿಧ ರೀತಿಯ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸುತ್ತಾರೆ. ಎಷ್ಟೋ ಬಾರಿ ಇದು ಕೂಡ ನಿರೀಕ್ಷಿತ ಫಲಿತಾಂಶ ಕೊಡುವುದಿಲ್ಲ.

ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಹಲವು ಗಂಭೀರ ಕಾಯಿಲೆಗಳ ತವರು. ಹಾಗಾಗಿ ರಾತ್ರಿಯ ಊಟದ ಸಮಯದಲ್ಲಿ ನೀವು ಕೆಲವು ನಿಯಮಗಳನ್ನು ಅನುಸರಿಸಿದ್ರೆ ನೀವು ಹೊಟ್ಟೆಯ ಕೊಬ್ಬಿನ ಜೊತೆಗೆ ಇಡೀ ದೇಹದ ಕೊಬ್ಬನ್ನು ಕಡಿಮೆ ಮಾಡಬಹುದು.

ಸಂಜೆ ಪೌಷ್ಟಿಕ ಆಹಾರ ಸೇವಿಸಿ…

ರಾತ್ರಿ ಆರೋಗ್ಯಕರ ಊಟ ಮಾಡಿ. ರಾತ್ರಿಯಲ್ಲಿ ಕಡಿಮೆ ತಿನ್ನಲು ಇದು ನಿಮಗೆ ಸಹಾಯ ಮಾಡುತ್ತದೆ. ಕೆಂಪು ಅಕ್ಕಿಯ ಅನ್ನ, ಹೆಸರು ಕಾಳು, ತುಪ್ಪ, ಹಾಲು, ಬಾರ್ಲಿ, ರಾಗಿ, ದಾಳಿಂಬೆ, ಜೇನುತುಪ್ಪ, ಒಣದ್ರಾಕ್ಷಿ, ಕಲ್ಲು ಉಪ್ಪು ಇತ್ಯಾದಿಗಳನ್ನು ನೀವು ರಾತ್ರಿ ಊಟದಲ್ಲಿ ಬಳಕೆ ಮಾಡಬೇಕು. ಇದು ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಈ ಆಹಾರಗಳು ವಿಶೇಷವಾಗಿ ಧಾನ್ಯಗಳು ಮತ್ತು ಪ್ರೋಟೀನ್‌ಗಳು ಹಗುರವಾದ ಸ್ವಭಾವವನ್ನು ಹೊಂದಿರುತ್ತವೆ. ಇವುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

ರಾತ್ರಿಯ ಊಟಕ್ಕೆ ರಾಗಿ ಬಳಸಿ… ರಾತ್ರಿಯ ಊಟಕ್ಕೆ ರಾಗಿ ದೋಸೆ, ರಾಗಿ ಪುಲಾವ್, ರಾಗಿ ಖಿಚಡಿ ಇತ್ಯಾದಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಇವು ಸುಲಭವಾಗಿ ಜೀರ್ಣವಾಗುತ್ತವೆ. ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ. ಇದು ನಿಮ್ಮ ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇವುಗಳ ಸೇವನೆಯಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.

ಸೂರ್ಯಾಸ್ತದ ಮೊದಲು ಊಟ ಮಾಡಿ… ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸೂರ್ಯಾಸ್ತದ ಮೊದಲು ನಿಮ್ಮ ರಾತ್ರಿಯ ಊಟವನ್ನು ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...