ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಕಾರಿನ ಚಾರ್ಜರ್ ಅನ್ನು ಎಬಿಬಿ ಬಿಡುಗಡೆ ಮಾಡಿದೆ. ಟೆಸ್ಲಾ, ಹ್ಯುಂಡಾಯ್ ಹಾಗೂ ಇತರೆ ಉತ್ಪಾದಕರ ಎಲೆಕ್ಟ್ರಿಕ್ ಕಾರುಗಳಿಂದಾಗಿ ಹೆಚ್ಚುತ್ತಿರುವ ಬೇಡಿಕೆಯ ಅನುಗುಣವಾಗಿ ಈ ಸವಲತ್ತು ಅಭಿವೃದ್ಧಿ ಮಾಡಲಾಗಿದೆ ಎಂದು ಸ್ವಿಸ್ ಕಂಪನಿ ತಿಳಿಸಿದೆ.
$3 ಶತಕೋಟಿ ಮೌಲ್ಯದಷ್ಟು ಇವಿ ಚಾರ್ಜಿಂಗ್ ಉದ್ಯಮ ಬೆಳೆಸುವ ಆಶಯ ಹೊಂದಿರುವ ಕಂಪನಿಯು ತನ್ನ ಟೆರ‍್ರಾ ಮಾಡ್ಯುಲರ್ ಚಾರ್ಜರ್ ಅನ್ನು ಪರಿಚಯಿಸಿದೆ.
ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಆರೋಪ: ನಟಿ ಪತಿಗೆ ರಿಲೀಫ್
ಈ ಚಾರ್ಜರ್ ಒಂದೇ ಬಾರಿಗೆ ನಾಲ್ಕು ವಾಹನಗಳನ್ನು ಚಾರ್ಜ್ ಮಾಡಬಲ್ಲದಾಗಿದೆ. ಯಾವುದೇ ಎಲೆಕ್ಟ್ರಿಕ್ ಕಾರ್ ಅನ್ನು 15 ನಿಮಿಷಗಳ ಒಳಗೆ ಈ ಚಾರ್ಜರ್ ಸಂಪೂರ್ಣವಾಗಿ ಚಾರ್ಜ್ ಮಾಡಬಲ್ಲದಾಗಿದೆ. ಒಂದು ಚಾರ್ಜ್ ಮಾಡಲು ಅನೇಕ ಗಂಟೆಗಳ ಕಾಲ ಕಾಯಬೇಕಾಗಿರುವ ವಿಚಾರ ಎವಿ ಗ್ರಾಹಕರಿಗೆ ಭಾರೀ ತಲೆನೋವು ತಂದಿತ್ತು.
“ಜಗತ್ತಿನಾದ್ಯಂತ ಸರ್ಕಾರಗಳು ಪರಿಸರ ಬದಲಾವಣೆ ವಿರುದ್ಧ ಹೋರಾಟದ ಭಾಗವಾಗಿ, ಎಲೆಕ್ಟ್ರಿಕ್ ವಾಹನಗಳು ಹಾಗೂ ಅವುಗಳನ್ನು ಚಾರ್ಜಿಂಗ್ ಮಾಡುವ ಜಾಲಗಳನ್ನು ಬೆಂಬಲಿಸುವ ನೀತಿಗಳನ್ನು ತರುತ್ತಿದ್ದು, ಅದರಲ್ಲೂ ತ್ವರಿತವಾಗಿ ಚಾರ್ಜ್ ಮಾಡಬಲ್ಲ ನಿಲ್ದಾಣಗಳ ಅಳವಡಿಕೆಗೆ ಒತ್ತು ನೀಡುತ್ತಿವೆ” ಎಂದು ಎಬಿಬಿಯ ಮೊಬಿಲಿಟಿ ವಿಭಾಗದ ಅಧ್ಯಕ್ಷ ಫ್ರಾಂಕ್ ವುಯೆಲನ್ ತಿಳಿಸಿದ್ದಾರೆ.