alex Certify BIG NEWS: ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಎಬಿಡಿ ವಿಲಿಯರ್ಸ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಎಬಿಡಿ ವಿಲಿಯರ್ಸ್..​..!

ದಕ್ಷಿಣ ಆಫ್ರಿಕಾದ ಸೂಪರ್​ ಸ್ಟಾರ್​ ಕ್ರಿಕೆಟಿಗ ಎಬಿಡಿ ವಿಲಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಸ್ಟಾರ್​ ಆಟಗಾರ ಎಬಿಡಿ ರಾಯಲ್​ ಚಾಲೆಂಜರ್ಸ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕನ್ನಡಿಗರ ಪಾಲಿಗೂ ಫೇವರಿಟ್​ ಎನಿಸಿದ್ದರು.

ಟ್ವಿಟರ್​ನಲ್ಲಿ ತಮ್ಮ ನಿವೃತ್ತಿ ವಿಚಾರ ಘೋಷಿಸಿದ ಎಬಿಸಿ, ‘ಜ್ವಾಲೆಯು ಇನ್ಮುಂದೆ ಪ್ರಕಾಶಮಾನವಾಗಿ ಉರಿಯೋದಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇದೊಂದು ನಂಬಲಾಗದ ಪ್ರಯಾಣವಾಗಿತ್ತು. ನಾನೀಗ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲು ಇಚ್ಛಿಸಿದ್ದೇನೆ.

ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ

ನಾನು ಮೈದಾನದಲ್ಲಿ ಅತ್ಯಂತ ಉತ್ಸಾಹದಿಂದ ಆಟವನ್ನು ಆಡಿದ್ದೇನೆ. ಆದರೆ ಈಗ 37ನೇ ವಯಸ್ಸಿನಲ್ಲಿ ಈ ಜ್ವಾಲೆಯು ಪ್ರಕಾಶಮಾನವಾಗಿ ಉರಿಯುತ್ತೆ ಎಂದು ಎನಿಸುತ್ತಿಲ್ಲ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಎಬಿಡಿ ವಿಲಯರ್ಸ್​ ನಿವೃತ್ತಿ ಘೋಷಣೆಯು ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಬಿಗ್​ ಶಾಕ್​ ಎಂಬಂತಾಗಿದೆ. ಕೊಹ್ಲಿ ಕೂಡ ಮುಂದಿನ ಸರಣಿಯಿಂದ ನಾಯಕತ್ವ ಮುಂದುವರಿಸೋದಿಲ್ಲ ಎಂದು ಹೇಳಿದ್ದರು. ಇದೀಗ ಎಬಿಡಿ ಕೂಡ ನಿವೃತ್ತಿ ಘೋಷಿಸಿರೋದು ಗಾಯದ ಮೇಲೆ ಬರೆ ಎಳೆದಂತೆ ಆಗಿರೋದಂತೂ ಸುಳ್ಳಲ್ಲ.

17 ವರ್ಷಗಳ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಎಬಿಡಿ ವಿಲಿಯರ್ಸ್​ 114 ಟೆಸ್ಟ್​, 228 ಏಕದಿನ ಪಂದ್ಯ ಹಾಗೂ 78 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. 2011ರಲ್ಲಿ ಆರ್​ಸಿಬಿ ತಂಡ ಸೇರ್ಪಡೆಯಾಗಿದ್ದ ಎಬಿಡಿ 10 ಐಪಿಎಲ್​ನ 10 ಆವೃತ್ತಿಗಳಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...