alex Certify ಉದ್ಯೋಗದ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್:‌ 10 ಸಾವಿರ ಮಂದಿ ನೇಮಕಕ್ಕೆ ಮುಂದಾದ ಓಲಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿದ್ದ ಮಹಿಳೆಯರಿಗೆ ಭರ್ಜರಿ ಗುಡ್‌ ನ್ಯೂಸ್:‌ 10 ಸಾವಿರ ಮಂದಿ ನೇಮಕಕ್ಕೆ ಮುಂದಾದ ಓಲಾ

ಓಲಾ ಕಂಪನಿಯು ತಮಿಳುನಾಡಿನಲ್ಲಿ ಕಾರ್ಖಾನೆ ನಿರ್ಮಾಣ ಮಾಡುತ್ತಿದ್ದು ಈ ಕಾರ್ಖಾನೆ ನಿರ್ಮಾಣವಾದ ಬಳಿಕ ಇಲ್ಲಿ ಸಂಪೂರ್ಣ ಮಹಿಳಾ ಉದ್ಯೋಗಿಯೇ ಕೆಲಸ ನಿರ್ವಹಿಸಲಿದ್ದಾರೆ ಎಂದು ಓಲಾ ಅಧ್ಯಕ್ಷ ಹಾಗೂ ಓಲಾ ಗ್ರೂಪ್​ ಸಿಇಓ ಭವೀಶ್​ ಅಗರ್​ವಾಲ್​ ಘೋಷಣೆ ಮಾಡಿದ್ದಾರೆ. ಓಲಾದ ಭವಿಷ್ಯದ ಈ ಕಾರ್ಖಾನೆಯು ಮಹಿಳೆಯರ ಅತಿದೊಡ್ಡ ಕಾರ್ಖಾನೆಯಾಗಿರಲಿದೆ. ಆತ್ಮ ನಿರ್ಭರ್ ಭಾರತ್​ಕ್ಕೆ ಆತ್ಮನಿರ್ಭರ್ ಸ್ತ್ರೀಯರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

500 ಎಕರೆ ವಿಸ್ತೀರ್ಣದಲ್ಲಿ ಈ ಕಾರ್ಖಾನೆ ನಿರ್ಮಾಣವಾಗುತ್ತಿದ್ದು ಇಲ್ಲಿ 10 ಸಾವಿರ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಲಾಗುತ್ತದೆ.
ತಮಿಳುನಾಡಿನಲ್ಲಿ ಮೊದಲ ಎಲೆಕ್ಟ್ರಿಕ್​ ಸ್ಕೂಟರ್ ಕಾರ್ಖಾನೆಯನ್ನು ತೆರೆಯಲು 2400 ಕೋಟಿ ರೂಪಾಯಿ ಹೂಡಿಕೆ ಮಾಡಿರುವುದಾಗಿ ಕಳೆದ ವರ್ಷ ಓಲಾ ಕಂಪನಿಯು ಹೇಳಿತ್ತು.

ಕಂಪನಿಯು ಆರಂಭದ ಹಂತದಲ್ಲಿ 10 ಲಕ್ಷ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಮೇರೆಗೆ ಕಾರ್ಯನಿರ್ವಹಿಸಲಿದೆ. ಹಾಗೂ ಬಳಿಕ ಈ ಉತ್ಪಾದನಾ ಸಾಮರ್ಥ್ಯವನ್ನು 20 ಲಕ್ಷಕ್ಕೆ ಏರಿಕೆ ಮಾಡುವುದಾಗಿ ಕಂಪನಿ ಹೇಳಿತ್ತು. ಬಳಿಕ ವಾರ್ಷಿಕ 1 ಕೋಟಿ ಉತ್ಪಾದನಾ ಸಾಮರ್ಥ್ಯವನ್ನು ಪೂರೈಸುವ ಗುರಿಯನ್ನು ಕಂಪನಿ ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...