
ನವದೆಹಲಿ: ಆರೋಗ್ಯ ಸೇತು(Aarogya Setu) ಬಳಕೆದಾರರು ಈಗ 14-ಅಂಕಿಯ ಅನನ್ಯ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯನ್ನು ರಚಿಸಬಹುದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, Aarogya Setu ಬಳಕೆದಾರರು ಈಗ ಅಪ್ಲಿಕೇಶನ್ನಿಂದ 14-ಅಂಕಿಯ ಅನನ್ಯ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ(ABHA) ಸಂಖ್ಯೆಯನ್ನು ರಚಿಸಬಹುದು. ಅವರು ತಮ್ಮ ಅಸ್ತಿತ್ವದಲ್ಲಿರುವ ಮತ್ತು ಹೊಸ ವೈದ್ಯಕೀಯ ದಾಖಲೆಗಳನ್ನು ಲಿಂಕ್ ಮಾಡಲು ABHA ಸಂಖ್ಯೆಯನ್ನು ಬಳಸಬಹುದು ಎಂದು ಹೇಳಲಾಗಿದೆ.