ಮದುಮಗ ಹಾಗೂ ಆತನ ನಾದಿನಿಯರ ನಡುವಿನ ಸಲಿಗೆ ಪ್ರಸಂಗಗಳು ಯಾವುದೇ ಮದುವೆ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆ ಎಂದರೆ ತಪ್ಪಲ್ಲ. ಭಾವನನ್ನು ಗೋಳು ಹೊಯ್ದುಕೊಂಡು, ಆರತಿ ಮಾಡುವುದರಿಂದ ಹಿಡಿದು, ರೇಗಿಸಿ ತಮಾಷೆ ನೋಡುವವರೆಗೂ ಮದುಮಗಳ ಸಹೋದರಿಯರು ಮದುವೆ ಸಮಾರಂಭದ ವೇಳೆ ಎಂಜಾಯ್ ಮಾಡುವುದು ಸಾಮಾನ್ಯ.
ಈ ಸುಂದರ ಬಾಂಧವ್ಯದ ಮೇಲೆ ಬೆಳಕು ಚೆಲ್ಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಡಿಯೋದಲ್ಲಿ ಮದುವೆಯ ಮೆರವಣಿಗೆಯಲ್ಲಿ ಆಗಮಿಸುವ ಮದುಮಗನನ್ನು ಮಂಟಪಕ್ಕೆ ಬರುವ ವೇಳೆ ಅಡ್ಡಗಟ್ಟುವ ಆತನ ನಾದಿನಿಯರು, “ನೀವು ಇಲ್ಲಿ ಯಾರಿಗಾಗಿ ಬಂದಿದ್ದೀರಿ?” ಎಂದು ಕಾಲೆಳೆಯುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸುವ ಮದುಮಗ, “ನೀವು ಆಹ್ವಾನಿಸಿದ್ದೀರಿ, ಅದಕ್ಕೇ,” ಎನ್ನುತ್ತಾನೆ.
ತಮ್ಮ ಹಾಡನ್ನು ಮುಂದುವರೆಸುವ ನಾದಿನಿಯರಿಗೆ, “ನಿಮ್ಮ ಸಹೋದರಿಯನ್ನು ಕರೆದೊಯ್ಯಲು ಬಂದಿರುವೆ,” ಎನ್ನುತ್ತಾನೆ ಮದುಮಗ.
ʼನವ ವಿವಾಹಿತʼರಿಗೆ ಇಲ್ಲಿದೆ ಟಿಪ್ಸ್
ಒಟ್ಟಾರೆ ನೆಟ್ಟಿಗರಿಗೆ ಮುದನೀಡಿದ ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ತಮ್ಮ ಮದುವೆಯಲ್ಲಿ ನಡೆದ ಇಂತಹ ಘಟನೆಯ ನೆನಪನ್ನೂ ಹಂಚಿಕೊಂಡಿದ್ದಾರೆ.
https://www.instagram.com/p/CMeDw7UJWHz/?utm_source=ig_web_copy_link