ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಸದನದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ ಪ್ರಶ್ನೆ ಕೇಳಿದ ವರದಿಗಾರರೊಬ್ಬರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯಸಭೆಯ 12 ಸಂಸದರನ್ನು ಅಮಾನತುಗೊಳಿಸಿದ ವಿಚಾರ ಹಾಗೂ ಲಖಿಂಪುರ ಘಟನೆ ವಿಚಾರವಾಗಿ ರಾಜ್ಯ ಸಚಿವ ಅಜಯ್ ಮಿಶ್ರಾ ಟೇನಿರನ್ನು ಕಿತ್ತೊಗೆಯುವ ವಿಚಾರವಾಗಿ ಮಾತನಾಡುತ್ತಿದ್ದ ವೇಳೆ ರಾಹುಲ್ ಗಾಂಧಿಗೆ ಈ ಪ್ರಶ್ನೆ ಕೇಳಲಾಗಿದೆ.
ಸಂಸತ್ತಿನಲ್ಲಿ ಶಿಸ್ತು ಇಲ್ಲದೇ ಇರುವ ಕಾರಣ ಚರ್ಚೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದ ಸರ್ಕಾರದ ಬಗ್ಗೆ ಮಾತನಾಡಲು ರಾಹುಲ್‌ರನ್ನು ವರದಿಗಾರ ಕೇಳಿದ್ದಾರೆ.
ವಯಸ್ಸು ಮುಚ್ಚಿಡಬೇಕಾ…? ಹಾಕಿದ್ರೆ ಮಾಡಿ ಈ ವ್ಯಾಯಾಮ
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, “ನೀವು ಸರ್ಕಾರಕ್ಕೆ ಕೆಲಸ ಮಾಡುತ್ತಿದ್ದೀರಾ?” ಎಂದು ಪದೇ ಪದೇ ಕೇಳಿದ್ದು, “ಸದನವನ್ನು ಶಿಸ್ತಿನಲ್ಲಿಡುವುದು ಸರ್ಕಾರದ ಕೆಲಸವೇ ಹೊರತು ವಿರೋಧ ಪಕ್ಷಗಳದ್ದಲ್ಲ” ಎಂದಿದ್ದಾರೆ.
ಅನೇಕ ರೈತರ ಸಾವಿಗೆ ಕಾರಣವಾದ ಲಖಿಂಪುರ ಘಟನೆಯ ಕುರಿತಂತೆ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿರುವ ನಡುವೆ ಸಂಸತ್ತಿನ ಚಳಿಗಾಲದ ಅಧಿವೇಶನ ಸಕ್ರಿಯವಾಗಿ ಚಾಲೂ ಆಗುತ್ತಿಲ್ಲ.