ತನ್ನ ಬಳಗ ಸೇರಿದರೆ ಸಂಪುಟದಲ್ಲಿ ಸ್ಥಾನ ಹಾಗೂ ಅಪಾರವಾಗಿ ದುಡ್ಡು ಕೊಡುವುದಾಗಿ ಬಿಜೆಪಿ ಪ್ರಲೋಭನೆ ಒಡ್ಡಿರುವುದಾಗಿ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಲೋಕಸಭಾ ಕ್ಷೇತ್ರದ ಸಂಸದ, ಹಾಗೂ ಆಪ್‌ನ ಪಂಜಾಬ್ ಘಟಕದ ಅಧ್ಯಕ್ಷ ಭಗ್ವಂತ್ ಮಾನ್ ಆಪಾದಿಸಿದ್ದಾರೆ.
“ಇಂದು ನಾನು ದೊಡ್ಡ ವಿಷಯವೊಂದನ್ನು ಬಹಿರಂಗಪಡಿಸಲಿದ್ದೇನೆ. ನಾಲ್ಕು ದಿನಗಳ ಹಿಂದೆ ನನಗೆ ಬಿಜೆಪಿಯ ನಾಯಕರೊಬ್ಬರು ಕರೆ ಮಾಡಿ, ತಮ್ಮ ಪಕ್ಷ ಸೇರಲು ಕೇಳಿಕೊಂಡು, ಅದಕ್ಕೆ ಪ್ರತಿಯಾಗಿ ದುಡ್ಡು ಹಾಗೂ ಸಂಪುಟ ದರ್ಜೆಯ ಸ್ಥಾನಮಾನ ನೀಡುವುದಾಗಿ ಹೇಳಿದ್ದರು. ಏಕೈಕ ಸಂಸದನಾಗಿರುವ ಕಾರಣ ನನ್ನ ವಿರುದ್ಧ ಅಮಾನತಿನ ಕಾನೂನು ಕೆಲಸ ಮಾಡದೇ ಇರುವ ಕಾರಣ, ನನಗೆ ನನ್ನ ಇಚ್ಚೆ ಪಡುವ ಸ್ಥಾನಮಾನವನ್ನು ಸಂಪುಟ ದರ್ಜೆಯಲ್ಲಿ ನೀಡಲಾಗುವುದು ಎಂದಿದ್ದರು. ನನ್ನ ಆಯ್ಕೆಯ ಸಚಿವಾಲಯ ಯಾವುದು ಎಂದು ಸಹ ಅವರು ನನ್ನನ್ನು ಕೇಳಿದ್ದರು,” ಎಂದು ಭಾನುವಾರ ಮಾಧ್ಯಮಗೋಷ್ಠಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಭಗ್ವಂತ್ ತಿಳಿಸಿದ್ದಾರೆ.
ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಉಚಿತ ಆಹಾರ ಧಾನ್ಯ ಕಡಿತ ಇಲ್ಲವೆಂದು ಸಚಿವರ ಸ್ಪಷ್ಟನೆ
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಭಗ್ವಂತ್, ಪಂಜಾಬ್‌ನಲ್ಲಿ ಕೇಸರಿ ಪಾಳೆಯಕ್ಕೆ ನೆಲೆ ಇಲ್ಲವೆಂದೂ, ಪಕ್ಷದ ಮೇಲೆ ರಾಜ್ಯದಲ್ಲಿ ಬಹಳ ಸಿಟ್ಟಿದ್ದು, ಅದರ ನಾಯಕರು ಗ್ರಾಮಗಳಿಗೆ ಬರಲೂ ಸಹ ಸಾಧ್ಯವಿಲ್ಲ ಎಂದಿದ್ದಾರೆ.
“ಕುದುರೆ ವ್ಯಾಪಾರದೊಂದಿಗೆ ಬಿಜೆಪಿ ಒಡೆದು ಆಳುವ ರಾಜಕಾರಣದಲ್ಲಿ ತೊಡಗಿದೆ. ಅದು ಪಶ್ಚಿಮ ಬಂಗಾಳವೇ ಇರಲಿ, ಗೋವಾ ಅಥವಾ ಮಧ್ಯ ಪ್ರದೇಶವೇ ಇರಲಿ. ನಾನು ಮಿಶನ್‌ನಲ್ಲಿದ್ದೇನೆಯೇ ಹೊರತು ಕಮಿಷನ್ ಮೇಲಲ್ಲ ಎಂದು ಬಿಜೆಪಿಗೆ ತಿಳಿಸಿದ್ದೇನೆ. ನನ್ನನ್ನು ಖರೀದಿಸಲು ಬೇಕಾದ ಕರೆನ್ಸಿ ಇನ್ನೂ ಮುದ್ರಣಗೊಂಡಿಲ್ಲ. ನಾನು ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅಲ್ಲಿಂದ ಹೊರಬಂದಿದ್ದೇನೆ,” ಎಂದು ಭಗ್ವಂತ್ ಹೇಳಿಕೊಂಡಿದ್ದಾರೆ.