![](https://kannadadunia.com/wp-content/uploads/2025/02/anokh-mittal.jpg)
ದರೋಡೆಕೋರರ ಗುಂಪೊಂದು ಆಮ್ ಆದ್ಮಿ ಪಕ್ಷದ ನಾಯಕ, ಉದ್ಯಮಿ ಅನೋಖ್ ಮಿತ್ತಲ್ ಹಾಗೂ ಅವರ ಪತ್ನಿ ಮೇಲೆ ದಾಳಿ ನಡೆಸಿದ್ದು, ಶಸ್ತ್ರಸಜ್ಜಿತ ಗುಂಪು ಮಿತ್ತಲ್ ಅವರ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದೆ.
ಪಂಜಾಬ್ ನ ಡೆಹ್ಲೋದಲ್ಲಿ ಈ ಘಟನೆ ನಡೆದಿದೆ. ಅನೋಖ್ ಮಿತ್ತಲ್ ಪತ್ನಿ ಲಿಪ್ಸಿ ದರೋಡೆಕೋರರ ದಾಳಿಯಲ್ಲಿ ಕೊಲೆಯಾಗಿದ್ದಾರೆ. ತಡರಾತ್ರಿ ಅನೋಖ್ ಮಿತ್ತಲ್ ಹಾಗೂ ಅವರ ಪತ್ನಿ ಲಿಪ್ಸಿ ಕಾರಿನಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದರು. ರೂರ್ಕಾ ಗ್ರಾಮದ ಬಳಿ ಸಿಧ್ವಾನ್ ಕಾಲುವೆ ಬಳಿ ಐವರು ದರೋಡೆಕೋರರು ಕಾರನ್ನು ತಡೆದಿದ್ದು, ಹರಿತವಾದ ಆಯುಧಗಳಿಂದ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ.
ಮಾರಣಾಂತಿಕವಾಗಿ ನಡೆದ ಹಲ್ಲೆಯಲ್ಲಿ ಲಿಪ್ಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಿತ್ತಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ದರೋಡೆಕೋರರು ಕಾರು ಸಮೇತ ಪರಾರಿಯಾಗಿದ್ದಾರೆ. ಗಾಯಾಳು ಮಿತ್ತಲ್ ಡಿಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.