ಇಳಿ ವಯಸ್ಸಿನಲ್ಲೂ ಭಾರೀ ಜೀವನೋತ್ಸಾಹ ತೋರುವ ಮೂಲಕ ಯುವಕರನ್ನೂ ನಾಚುವಂತೆ ಮಾಡುವ ಅನೇಕ ಹಿರಿಯ ಜೀವಿಗಳ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಲೇ ಇರುತ್ತವೆ. ಮ್ಯಾರಾಥಾನ್ ಓಟ, ನೃತ್ಯ ಸೇರಿದಂತೆ ಭಾರೀ ಹುಮ್ಮಸ್ಸು ಬೇಡುವ ಅನೇಕ ಕೆಲಸಗಳನ್ನು ಹಿರಿಯರು ಲೀಲಾಜಾಲವಾಗಿ ಮಾಡುವುದನ್ನು ನೋಡುವುದೇ ಚಂದ.
ಇತ್ತೀಚೆಗೆ ಮರಾಠಿ ಗಾನಸಭೆಯೊಂದರಲ್ಲಿ ಹಿರಿಯ ಹೆಂಗಸೊಬ್ಬರು ಭಾರೀ ಆನಂದದಿಂದ ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮನಬಿಚ್ಚಿ ಇಷ್ಟವಾಗಿದ್ದನ್ನು ಮಾಡಿಕೊಂಡು ಸಂತಸದಿಂದ ಇರಲು ವಯಸ್ಸು ಅಡ್ಡಿಯಲ್ಲ ಎಂದು ಈ ಹಿರಿಯ ಜೀವ ಮತ್ತೊಮ್ಮೆ ಸಾಬೀತು ಮಾಡಿದೆ.
ಸಾಂಪ್ರದಾಯಿಕ ಮರಾಠಿ ಧಿರಿಸಲ್ಲಿರುವ ಈ ಮಹಿಳೆ, ನಾವ್ರಿ ನಟಾಲಿ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ. ಮಹಾರಾಷ್ಟ್ರ ಟೈಮ್ಸ್ ಪ್ರಕಾರ, ಸುನೀಲ್ ಶೆಲ್ಕೆ ಪ್ರತಿಷ್ಠಾನ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮರಾಠಿ ನಟ ಆದೇಶ್ ಬಂಡೇಕರ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಪ್ರೇಕ್ಷಕರ ವಲಯದಲ್ಲಿದ್ದ ಎಲ್ಲ ಸ್ತ್ರಿಯರೂ ನೃತ್ಯ ಮಾಡಿದ್ದಾರೆ.
ಇವರ ಪೈಕಿ ಆಜಿ (ಅಜ್ಜಿ) ಒಬ್ಬರು ಎಲ್ಲರ ನಡುವೆ ಎದ್ದು ಕಂಡಿದ್ದಾರೆ. ಆಜಿಯ ಈ ಎನರ್ಜಿ, ಹುಮ್ಮಸ್ಸು ಹಾಗೂ ಸ್ಪೂರ್ತಿಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
“ಆಜಿ ನನ್ನ ಖಿನ್ನತೆಯನ್ನೆಲ್ಲಾ ಗುಣಪಡಿಸಿದ್ದಾರೆ,” ಎಂದು ನೆಟ್ಟಿಗರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
https://twitter.com/sportscull/status/1639556066538053636?ref_src=twsrc%5Etfw%7Ctwcamp%5Etweetembed%7Ctwterm%5E1639632134028644352%7