
ಆದರೆ ಅನೇಕರಿಗೆ ಈ ತಿನಿಸನ್ನ ತಿನ್ನಬೇಕು ಎಂದು ಆಸೆ ಇದ್ದರೂ ಸಹ ಮಧುಮೇಹದಿಂದ ಸಮಸ್ಯೆಯಿಂದಾಗಿ ತಿನ್ನೋಕೆ ಆಗೋದಿಲ್ಲ. ಸಿಹಿ ತಿನಿಸನ್ನ ತಿನ್ನಲಾರದಂತೆ ನಿರ್ಬಂಧ ಇದ್ದರೂ ಸಹ ಕೆಲವರೂ ಎಲ್ಲರ ಕಣ್ತಪ್ಪಿಸಿ ಚೂರೇ ಚೂರು ಜಿಲೇಬಿಯನ್ನ ಬಾಯಿಗೆ ಹಾಕಿಕೊಳ್ತಾರೆ.
ಅಂದಹಾಗೆ ಜಿಲೇಬಿ ಬಗ್ಗೆ ಇಷ್ಟೆಲ್ಲ ವಿವರಣೆ ನೀಡೋಕೆ ಕಾರಣ ಕೂಡ ಇದೆ. ಡಾ.ಸಂದೀಪ್ ಮಿತ್ತಲ್ ಎಂಬ ಐಪಿಎಸ್ ಅಧಿಕಾರಿಯೊಬ್ಬರು ತಾವು ಬಾಲ್ಯದಲ್ಲಿ ಜಿಲೇಬಿ ತಿನ್ನುತ್ತಿದ್ದ ಬಗ್ಗೆ ಹಳೆಯ ನೆನಪನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದೀಗ ಅವರ ಪತ್ನಿ ಡಾ.ರಿಚಾ ಮಿತ್ತಲ್ರಿಂದಾಗಿ ತಮಗೆ ಜಿಲೇಬಿ ತಿನ್ನಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಹಿಂದಿಯಲ್ಲಿ ಮಿತ್ತಲ್ ಈ ಟ್ವೀಟ್ನ್ನು ಮಾಡಿದ್ದಾರೆ. ನಾನು ಬಾಲ್ಯದಲ್ಲಿ ಕೇವಲ 25 ಪೈಸೆ ಖರ್ಚು ಮಾಡಿ 1 ಜಿಲೇಬಿಯನ್ನ ತಿನ್ನುತ್ತಿದ್ದೆ. ಆಗೆಲ್ಲ ನಾನು ದೊಡ್ಡವನಾದ ಮೇಲೆ ದುಡಿದು ಹಣ ಸಂಪಾದಿಸಿ ಮೂರ್ನಾಲ್ಕು ಜಿಲೇಬಿ ಖರೀದಿ ಮಾಡಬೇಕು ಎಂದು ಕನಸು ಕಾಣುತ್ತಿದ್ದೆ. ಆದರೆ ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಜಿಲೆಬಿ ಕೊಳ್ಳಲು ನನ್ನ ಬಳಿ ಸಾಕಷ್ಟು ಹಣವಿದ್ದರೂ ಸಹ ನನ್ನ ಪತ್ನಿ ಇದಕ್ಕೆ ಒಪ್ಪದ ಕಾರಣ ಸಿಹಿ ತಿನಿಸನ್ನು ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟಾಯಿಸಿದ್ದಾರೆ.
ಈ ಫನ್ನಿ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಈ ಟ್ವೀಟ್ಗೆ ಅವರ ಪತ್ನಿ ಇವತ್ತು ನೀವು ಮನೆಗೆ ಬನ್ನಿ ಎಂದು ಪ್ರತ್ಯುತ್ತರ ನೀಡಿದ್ದು ಇದನ್ನ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ.