ಉತ್ತರ ಪ್ರದೇಶದ ಜಲೌನ್‌ನ ಕಲ್ಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ನಿಲ್ಲಿಸಿ, ಆತನನ್ನು ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವತಿ, ಪ್ರಭಾಕರ್ ಚತುರ್ವೇದಿ ಎಂಬ ಯುವಕ ತನ್ನ ಅಶ್ಲೀಲ ವಿಡಿಯೋವನ್ನು ವೈರಲ್ ಮಾಡಿದ್ದರಿಂದ ತನ್ನ ಬಾಯ್ ಫ್ರೆಂಡ್ ಜೊತೆಗಿನ ಸಂಬಂಧ ಮುರಿದು ಬಿದ್ದಿದೆ ಎಂದು ಆರೋಪಿಸಿದ್ದಾಳೆ. ಈ ಘಟನೆ ಜನನಿಬಿಡ ರಸ್ತೆಯ ಮಧ್ಯದಲ್ಲಿ ನಡೆದಿದ್ದು, ದೊಡ್ಡ ಗುಂಪು ಜಮಾಯಿಸಿತ್ತು. ಈ ಹೈ-ವೋಲ್ಟೇಜ್ ಡ್ರಾಮಾವನ್ನು ಪ್ರತ್ಯಕ್ಷದರ್ಶಿಗಳು ರೆಕಾರ್ಡ್ ಮಾಡಿದ್ದಾರೆ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಯುವತಿ, ಯುವಕನನ್ನು ರಸ್ತೆಯಲ್ಲಿ ನಿಲ್ಲಿಸಿ, ಹಲವಾರು ಬಾರಿ ಕಪಾಳಕ್ಕೆ ಹೊಡೆದು ಗಲಾಟೆ ಸೃಷ್ಟಿಸಿದ್ದಾಳೆ. “ನನ್ನ ಕುಟುಂಬವನ್ನು ಹಾಳು ಮಾಡಿದವನು ನೀನೇ” ಎಂದು ಆಕೆ ಯುವಕನನ್ನು ನಿಂದಿಸಿದ್ದಾಳೆ. ನಂತರ ಆತನಿಗೆ ಕರೆ ಮಾಡಲು ಹೇಳಿದ್ದಾಳೆ. “ಮೊದಲು ಕರೆ ಮಾಡು, ಕರೆ ಮಾಡುವವರೆಗೆ ಮೊಬೈಲ್ ಸಿಗುವುದಿಲ್ಲ” ಎಂದು ಯುವತಿ ಹೇಳಿದ್ದಾಳೆ. ಯುವಕ ತನ್ನ ಫೋನ್ ಅನ್ನು ಯುವತಿಯಿಂದ ಹಿಂದಕ್ಕೆ ಪಡೆಯಲು ಪ್ರಯತ್ನಿಸಿದಾಗ, “ಅಂಕಲ್ ವಿಡಿಯೋ ಮಾಡಿ” ಎಂದು ಯುವತಿ ಕೂಗಿದ್ದಾಳೆ.
“ಪ್ರಭಾಕರ್ ಚತುರ್ವೇದಿ ನನ್ನ ವಿಡಿಯೋವನ್ನು ವೈರಲ್ ಮಾಡಿ ಸುಳ್ಳು ಆಡಿಯೋ ರೆಕಾರ್ಡಿಂಗ್ ಮಾಡುತ್ತಾನೆ. ನಾನು ನನ್ನ ಕುಟುಂಬದಿಂದ ದೂರವಿದ್ದೇನೆ, ಈ ನಾಚಿಕೆಗೇಡಿತನದಿಂದ ನನ್ನ ಕುಟುಂಬ ನನ್ನನ್ನು ಹೊರ ಹಾಕಿದೆ. ನನಗೆ ಯಾರೂ ಇಲ್ಲ. ನನಗೆ ನನ್ನ ಬಾಯ್ ಫ್ರೆಂಡ್ ಕರೆ ಕೂಡ ಮಾಡುವುದಿಲ್ಲ, ಈತ ನನ್ನ ಸಂಬಂಧವನ್ನು ಹಾಳು ಮಾಡಿಟ್ಟಿದ್ದಾನೆ” ಎಂದು ಯುವತಿ ಹೇಳಿದ್ದಾಳೆ.
ಯುವಕ ತನ್ನ ಫೋನ್ ಅನ್ನು ಯುವತಿಯಿಂದ ವಾಪಸ್ ಪಡೆದ ನಂತರ, ಆಕೆ ಅವನ ಮೊಬೈಲ್ ಫೋನ್ ಮತ್ತೆ ಪಡೆಯಲು ನೋಡಿದ್ದು, ಆದರೆ ಯುವಕ ಅದನ್ನು ನೀಡಿಲ್ಲ. ಯುವತಿ ಯಮುನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. “ನೀನು ನನ್ನನ್ನು ಅವಮಾನಿಸಿದ್ದೀಯ, ನನ್ನ ಕುಟುಂಬ ಹಾಳಾಗಿದೆ….. ನಿನ್ನಿಂದಾಗಿ ಇಂದು ನಾನು ಯಮುನಾ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ…… ಮೊಬೈಲ್ ಕೊಡು” ಎಂದು ಯುವತಿ ಹೇಳಿದ್ದಾಳೆ.
ಜನರು ಯುವತಿಯ ಗುರುತಿನ ಬಗ್ಗೆ ಕೇಳಿದಾಗ, “ನಾನು ಕಾನ್ಪುರ ದೆಹತ್‌ನವಳು…… ಒಂದು ದಿನ ಅವನು ನನ್ನ ಮೊಬೈಲ್ ಅನ್ನು ತೆಗೆದುಕೊಂಡು ನನ್ನೆಲ್ಲಾ ವಿಷಯಗಳನ್ನು ಹೊರತೆಗೆದಿದ್ದಾನೆ, ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದು, ನಾನು ಅವನನ್ನು ಪ್ರೀತಿಸುವುದಿಲ್ಲ.ಅವನು ನನ್ನ ಮನೆಯಲ್ಲಿ ಮತ್ತು ನನ್ನ ಬಾಯ್ ಫ್ರೆಂಡ್ ಬಳಿ ಸುಳ್ಳು ಮತ್ತು ಅರ್ಧ ಸತ್ಯಗಳನ್ನು ಹೇಳಿದ್ದಾನೆ,” ಎಂದು ಯುವತಿ ಹೇಳಿದ್ದಾಳೆ.
ಯುವತಿಯ ವರ್ತನೆಗೆ ಕೋಪಗೊಂಡ ಯುವಕ, “ನೀವು ನನ್ನನ್ನು ರಸ್ತೆಯಲ್ಲಿ ಅವಮಾನಿಸುತ್ತಿದ್ದೀರಿ” ಎಂದು ಹೇಳಿದ್ದಾನೆ. ಆದರೆ ಯುವತಿ ಅದನ್ನು ನಿರಾಕರಿಸಿದ್ದಾಳೆ. ವಿಡಿಯೋ ರೆಕಾರ್ಡ್ ಮಾಡುವ ವ್ಯಕ್ತಿ ಹೆಸರನ್ನು ಕೇಳಿದರೂ ಯುವತಿ ತನ್ನ ಹೆಸರನ್ನು ಬಹಿರಂಗಪಡಿಸಿಲ್ಲ.
ಯುವಕ ತನ್ನ ಮೊಬೈಲ್ ಫೋನ್‌ನಲ್ಲಿ ಒಬ್ಬ ಮಹಿಳೆಗೆ ಕರೆ ಮಾಡಿ, “ನೋಡಿ, ಅವಳು ನನ್ನ ಬ್ಯಾಗ್ ಹಿಡಿದುಕೊಂಡು ರಸ್ತೆಯಲ್ಲಿದ್ದಾಳೆ ಮತ್ತು ನನ್ನನ್ನು ಅವಮಾನಿಸುತ್ತಿದ್ದಾಳೆ…… ಅವಳನ್ನು ಬಿಡಿಸಿ, ಇಲ್ಲದಿದ್ದರೆ ನಾನು ಅವಳನ್ನು ಯಮುನಾದಲ್ಲಿ ಎಸೆಯುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ನಂತರ ಅವನು ಫೋನ್ ಅನ್ನು ಯುವತಿಗೆ ನೀಡಿ ಮಾತನಾಡಲು ಹೇಳಿದ್ದಾನೆ. ಯುವತಿ ಫೋನ್ ತೆಗೆದುಕೊಂಡು ಆ ಮಹಿಳೆಗೂ ಯಮುನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.
🚨 जालौन: स्कूटी सवार युवती ने बीच सड़क किया हाईवोल्टेज ड्रामा
🔹 घटना: जालौन के कालपी कोतवाली क्षेत्र में युवती ने बीच सड़क पर बाइक सवार युवक से हंगामा किया।
🔹 कारण: युवती ने युवक पर अश्लील वीडियो वायरल करने और प्रेमी से रिश्ता तोड़वाने का आरोप लगाया।
🔹 मारपीट: गाली-गलौज… pic.twitter.com/ma0T670Ulz
— भारत समाचार | Bharat Samachar (@bstvlive) February 3, 2025