ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇತ್ತೀಚಿನ ದಿನಗಳಲ್ಲಿ ಖುದ್ದು ತಾನೇ ಆಧಾರ್‌ನ ಪಿವಿಸಿ ಕಾರ್ಡ್‌ಗಳನ್ನು ಸುರಕ್ಷಿತ ಹಾಗೂ ಸುಭದ್ರವಾದ ರೂಪದಲ್ಲಿ ಪರಿಚಯಿಸಿದೆ.
ಈ ಕಾರ್ಡ್‌ಗಳಿಗೆ ಆರ್ಡರ್ ಮಾಡುವ ನಾಗರಿಕರ ಮನೆಗಳಿಗೇ ನೇರವಾಗಿ ಈ ಕಾರ್ಡ್‌ಗಳನ್ನು ಪ್ರಾಧಿಕಾರ ಕಳುಹಿಸಲಿದೆ. ಇದಲ್ಲದೇ ಆಧಾರ್ ಪತ್ರ, ಇ ಆಧಾರ್ ಮತ್ತು ಎಂ ಆಧಾರ್‌ಗಳ ರೂಪದಲ್ಲೂ ಆಧಾರ್ ಬರಲಿದೆ.
“ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ಪಿವಿಸಿ ಆಧಾರ್ ಕಾಪಿಗಳ ಬಳಕೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಏಕೆಂದರೆ ಇವುಗಳಲ್ಲಿ ಭದ್ರತೆಯ ಯಾವುದೇ ಫೀಚರ್‌ಗಳು ಇರುವುದಿಲ್ಲ. ನೀವು 50 ರೂ. (ಜಿಎಸ್‌ಟಿ & ಸ್ಪೀಡ್ ಪೋಸ್ಟ್ ಶುಲ್ಕ ಸೇರಿ) ಪಾವತಿ ಮಾಡುವ ಮೂಲಕ ಆಧಾರ್ ಪಿವಿಸಿ ಕಾರ್ಡ್ ಆರ್ಡರ್ ಮಾಡಬಹುದಾಗಿದೆ” ಎಂದು ಇತ್ತೀಚಿನ ಟ್ವೀಟ್ ಒಂದರಲ್ಲಿ ಪ್ರಾಧಿಕಾರ ತಿಳಿಸಿದೆ.
ಪ್ರಾದೇಶಿಕ ಭಾಷೆಗಳಲ್ಲೂ ‘ಆಧಾರ್’ ಅಪ್ ಡೇಟ್ ಗೆ ಅವಕಾಶ ನೀಡಿದ UIDAI
ಆಧಾರ್ ಪಿವಿಸಿ ಕಾರ್ಡ್‌ಗೆ ಆರ್ಡರ್ ಮಾಡುವ ವಿಧಾನ:
1. https://uidai.gov.in ಅಥವಾ https://residnt.uidai.gov.inಗೆ ಭೇಟಿ ಕೊಡಿ.
2. ”Order Aadhaar Card” ಸೇವೆಯ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ 12-ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಎಂಟರ್ ಮಾಡಿ ಅಥವಾ 16 ಅಂಕಿಯ ವಿಐಡಿ ಅಥವಾ 28 ಅಂಕಿಯ ನೋಂದಣಿ ಐಡಿ ಎಂಟರ್ ಮಾಡಿ.
4. ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ.
5. ನಿಮ್ಮ ಬಳಿ ಟಿಓಟಿಪಿ ಇದ್ದಲ್ಲಿ, ”I have TOTP” ಆಯ್ಕೆ ಮಾಡಿ.
6. “Request OTP” ಮೇಲೆ ಕ್ಲಿಕ್ ಮಾಡಿ.
7. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಓಟಿಪಿ/ಟಿಓಟಿಪಿ ಎಂಟರ್ ಮಾಡಿ.
8. ”Terms and Conditions” ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
9. “Submit” ಆಯ್ಕೆ ಮೇಲೆ ಕ್ಲಿಕ್ ಮಾಡಿ ಓಟಿಪಿ/ಟಿಓಟಿಪಿ ಖಾತ್ರಿ ಪೂರ್ಣಗೊಳಿಸಿ.
10. ಮುಂದಿನ ಸ್ಕ್ರಿನ್‌ನಲ್ಲಿ, ಆಧಾರ್ ವಿವರಗಳ ಪ್ರೀವ್ಯೂ ಸಿಗಲಿದ್ದು, ಪ್ರಿಂಟ್‌ಗೆ ಆರ್ಡರ್ ಮಾಡುವ ಮುನ್ನ ಒಮ್ಮೆ ವಿವರಗಳನ್ನು ಖಾತ್ರಿ ಪಡಿಸಿಕೊಳ್ಳಬಹುದು.
11. “Make Payment” ಮೇಲೆ ಕ್ಲಿಕ್ ಮಾಡಿ, ಡಿಜಿಟಲ್ ಸಹಿ ಇರುವ ರಸೀದಿ ಸೃಷ್ಟಿಯಾಗಲಿದ್ದು, ಇದನ್ನು ಪಿಡಿಎಫ್ ಆವೃತ್ತಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಎಸ್‌ಎಂಎಸ್ ಮೂಲಕ ನಿಮಗೆ ಸರ್ವೀಸ್ ವಿನಂತಿ ಸಹ ಸಿಗಲಿದೆ.
12. ಆಧಾರ್ ಕಾರ್ಡ್ ಬರುವವರೆಗೂ ನಿವಾಸಿಗಳು, ಎಸ್‌ಆರ್‌ಎನ್ ಸ್ಟೇಟಸ್ ನೋಡಬಹುದು. ಇದಕ್ಕೆಂದು ಎಡಬ್ಲ್ಯೂಬಿ ಸಂಖ್ಯೆ ಇರುವ ಎಸ್‌ಎಂಎಸ್ ಅನ್ನು ನಿಮ್ಮ ಆಧಾರ್ ಪಿವಿಸಿಯನ್ನು ಕಳುಹಿಸಿದ ಕೂಡಲೇ ಕಳುಹಿಸಲಾಗುವುದು. ಅಂಚೆ ಇಲಾಖೆ ಜಾಲತಾಣದ ಮೂಲಕ ನೀವು ಇದರ ಟ್ರ‍್ಯಾಕಿಂಗ್ ಮಾಡಬಹುದು.