ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರವು ಸಾಮಾಜಿಕ ಭದ್ರತೆ ಪಿಂಚಣಿಯನ್ನು ಕೇವಲ ಆಧಾರ್ ಸೀಡ್ ಆದ ಖಾತೆಗಳಿಗೆ ಮಾತ್ರ ವರ್ಗಾಯಿಸಲು ನಿರ್ಧರಿಸಿದ್ದು, ಆಧಾರ್ ಸೀಡಿಂಗ್ ಆಗದ ಖಾತೆಗಳಿಗೆ ಪಿಂಚಣಿ ಸ್ಥಗಿತಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಅಂಚೆ ವಿಭಾಗದ ಎಲ್ಲಾ ಫಲಾನುಭವಿಗಳಿಗೆ ಸರ್ಕಾರದಿಂದ ದೊರಕುವ ಸಾಮಾಜಿಕ ಭದ್ರತೆ ಪಿಂಚಣಿ ರದ್ದಾಗದಂತೆ ಅವರ ಅಂಚೆ ಉಳಿತಾಯ ಖಾತೆಗಳಿಗೆ ಆಧಾರ್ ಸೀಡ್ ಮಾಡುವಂತಹ ಶಿಬಿರಗಳನ್ನು ಪ್ರತಿ ಅಂಚೆ ಕಚೇರಿಯಲ್ಲಿ ನಡೆಸುವ ಮೂಲಕ ಆರಂಭಿಸಿದೆ.
ಪಿಂಚಣಿ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಅಂಚೆ ಕಚೇರಿಯ ಖಾತೆಗಳಿಗೆ ಜಮವಾದ ಹಣವನ್ನು ನಿಮ್ಮ ಮನೆ ಬಾಗಿಲಲ್ಲಿ ಕೊಡುವ ವ್ಯವಸ್ಥೆ ಅತಿ ಶೀಘ್ರದಲ್ಲಿ ಜಾರಿಗೆ ತರಲಿದ್ದು, ನಿಮ್ಮ ವ್ಯಾಪ್ತಿಗೆ ಬರುವ ಅಂಚೆ ಕಚೇರಿ ಅಥವಾ ಅಂಚೆ ಪೇದೆಯನ್ನು ಸಂಪರ್ಕಿಸಿ ನಿಮ್ಮ ಉಳಿತಾಯ ಖಾತೆ (SB) ಗಳಿಗೆ ಮತ್ತು ಖಾತೆ ಇಲ್ಲದವರು ಅಂಚೆ ಕಚೇರಿಯಲ್ಲಿ POSB ಹೊಸ ಖಾತೆಗಳನ್ನು ತೆರೆದು ಪಿಂಚಣಿಯನ್ನು ಪಡೆಯಬಹುದಾಗಿದೆ. ಅಂಚೆ ಕಚೇರಿಯ ಉಳಿತಾಯ ಖಾತೆಗೆ ತ್ವರಿತ ಆಧಾರ್ ಸೀಡಿಂಗ್ ಮಾಡಲು D-Cube ಎಂಬ ಹೊಸ ವ್ಯವಸ್ಥೆ ಜಾರಿಗೊಳಿಸಿದೆ. ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಶಿವಮೊಗ್ಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.