ಭಾರತದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ದಾಖಲೆಯಾಗಿದೆ. ಕೆಲ ಸರ್ಕಾರಿ ಹಾಗೂ ಖಾಸಗಿ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಗೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಆದ್ರೆ ಭಾರತದಲ್ಲಿ ಅನೇಕ ಕಡೆ ಹಾಗೂ ಅನೇಕರ ಬಳಿ ಇಂಟರ್ನೆಟ್ ಸೌಲಭ್ಯವಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಯುಐಡಿಎಐ ವೈಶಿಷ್ಟ್ಯ ಸೇವೆಯನ್ನು ಪ್ರಾರಂಭಿಸಿದೆ.
ಯುಐಡಿಎಐ, ಆಧಾರ್‌ಗೆ ಸಂಬಂಧಿಸಿದ ಕೆಲವು ಸೇವೆಗಳನ್ನು ಪ್ರಾರಂಭಿಸಿದೆ. ಈ ಸೇವೆಗಳ ಬಗ್ಗೆ ಮಾಹಿತಿ ಪಡೆಯಲು ಯುಐಡಿಎಐ ವೆಬ್‌ಸೈಟ್ ತೆರೆಯುವ ಅಗತ್ಯವಿಲ್ಲ. ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್ ಇಲ್ಲದೆ ಫೀಚರ್ ಫೋನ್ ನಲ್ಲಿ ನೀವು ಈ ಸೇವೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಆಧಾರ್ ಕಾರ್ಡನ್ನು ಈಗ ಲಾಕ್ ಹಾಗೂ ಅನ್ಲಾಕ್ ಕೂಡ ಮಾಡಬಹುದು. ಲಾಕ್ ಹಾಗೂ ಅನ್ಲಾಕ್ ಮಾಡಲು ವರ್ಚುವಲ್ ಐಡಿ ಅವಶ್ಯಕತೆಯಿರುತ್ತದೆ.
ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಹಾಯವಾಣಿ ಸಂಖ್ಯೆ 1947 ಗೆ ಎಸ್ಎಂಎಸ್ ಕಳುಹಿಸುವ ಮೂಲಕ ನಿಮಗೆ ಬೇಕಾದ ಯಾವುದೇ ಸೌಲಭ್ಯ ಅಥವಾ ಸೇವೆಯ ಲಾಭವನ್ನು ಪಡೆಯಬಹುದು. ವರ್ಚುವಲ್ ಐಡಿಯನ್ನು ರಚಿಸಲು, ಮೊಬೈಲ್ ನಲ್ಲಿ ಎಸ್ಎಂಎಸ್ ಕಳುಹಿಸಬೇಕು. ಮೊದಲು GVID (SPACE) ಮತ್ತು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ನಮೂದಿಸಿ ಅದನ್ನು 1947 ಗೆ ಕಳುಹಿಸಬೇಕು. ವರ್ಚುವಲ್ ಐಡಿ ಪಡೆಯಲು, RVID (SPACE) ಬಿಟ್ಟು ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ನಮೂದಿಸಿ ಎಸ್ಎಂಎಸ್ ಮಾಡಬೇಕು.
ಒಟಿಪಿಯನ್ನು ಎರಡು ರೀತಿಯಲ್ಲಿ ಪಡೆಯಬಹುದು. ಆಧಾರ್ ಸಂಖ್ಯೆ ಮೂಲಕ ಹಾಗೂ ವರ್ಚುವಲ್ ಐಡಿ ಮೂಲಕ ಒಟಿಪಿ ಪಡೆಯಬಹುದು. ಆಧಾರ್ ಗೆ ಒಟಿಪಿ ಬೇಕೆಂದ್ರೆ GETOTP (ಸ್ಪೇಸ್) ಮತ್ತು ನಿಮ್ಮ ಆಧಾರ್‌ನ ಕೊನೆಯ ನಾಲ್ಕು ಅಂಕೆಗಳನ್ನು ನಮೂದಿಸಬೇಕು. ವರ್ಚುವಲ್ ಐಡಿಯಿಂದ ಒಟಿಪಿ ಬೇಕಾದ್ರೆ GETOTP (ಸ್ಪೇಸ್) ಮತ್ತು ನಿಮ್ಮ ಅಧಿಕೃತ ವರ್ಚುವಲ್ ಐಡಿಯ ಕೊನೆಯ 6 ಅಂಕೆಗಳನ್ನು ಎಸ್ಎಂಎಸ್ ಮಾಡಬೇಕು.
ಹಾಗೆ ಲಾಕ್, ಅನ್ಲಾಕ್ ಮಾಡುವಾಗಲೂ ಎಸ್ಎಂಎಸ್ ಕಳುಹಿಸಬಹುದು. ‘GETOTP’ (SPACE) ಮತ್ತು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ನಮೂದಿಸಿ. ಒಟಿಪಿ ಸ್ವೀಕರಿಸಿದ ತಕ್ಷಣ ಎರಡನೇ ಎಸ್ಎಂಎಸ್ ಕಳುಹಿಸಬೇಕು. LOCKUID (SPACE) ನಿಮ್ಮ ಆಧಾರ್‌ನ ಕೊನೆಯ 4 ಅಂಕೆಗಳನ್ನು (SPACE) 6 ಅಂಕಿಯ ಒಟಿಪಿ ಹಾಕಿ ಎಸ್ಎಂಎಸ್ ಕಳುಹಿಸಬೇಕು. ಆಗ ಆಧಾರ್ ಲಾಕ್ ಆಗುತ್ತದೆ.
‘GETOTP’ (SPACE) ಎಂದು ಟೈಪ್ ಮಾಡಿ, ನಂತರ ನಿಮ್ಮ ವರ್ಚುವಲ್ ಐಡಿಯ ಕೊನೆಯ 6 ಅಂಕೆಗಳನ್ನು ನಮೂದಿಸಿ. ಅನ್‌ಲಾಕ್ (ಸ್ಪೇಸ್) ಮತ್ತು ನಿಮ್ಮ ವಿಐಡಿ (ಸ್ಪೇಸ್) 6 ಅಂಕಿಗಳ ಕೊನೆಯ 6 ಅಂಕಿಗಳ ಒಟಿಪಿ ಬರೆದು ಇನ್ನೊಂದು ಎಸ್‌ಎಂಎಸ್ ಕಳುಹಿಸಿದ್ರೆ ಆಧಾರ್ ಅನ್ಲಾಕ್ ಆಗುತ್ತದೆ.