ಬಹುಶಃ ದೇಶದಲ್ಲಿ ಮಹತ್ವದ ದಾಖಲೆಗಳ ಪಟ್ಟಿಯಲ್ಲಿ ’ಆಧಾರ್’ ಮೊದಲ ಸ್ಥಾನದಲ್ಲಿದೆ. ಹೆಸರು, ವಸತಿಯ ಅಧಿಕೃತ ದಾಖಲೆ ಎನಿಸಿರುವ ಜತೆಗೆ ನೇರ ಖಾತೆಗೆ ಹಣ ವರ್ಗಾವಣೆ ವ್ಯವಸ್ಥೆಗೂ ಆಧಾರ್ ಕಾರ್ಡ್ /ಸಂಖ್ಯೆ ಪ್ರಮುಖವಾಗಿದೆ.
ಆದಾಯ ತೆರಿಗೆ ಪಾವತಿದಾರರ ಪ್ಯಾನ್ ಕಾರ್ಡ್‌ಗೆ, ಚಾಲನಾ ಪರವಾನಗಿಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯವೂ ಪ್ರಗತಿಯಲ್ಲಿದೆ. ರೇಷನ್ ಕಾರ್ಡ್‌ಗಳಿಗೂ ಆಧಾರ್ ಸಂಖ್ಯೆಯೇ ಆಧಾರವಾಗಿದೆ. ಪ್ರತಿ ಪ್ರಜೆಯನ್ನು ಆಧಾರ್ ಸಂಖ್ಯೆಯಿಂದಲೇ ಗುರುತಿಸಲಾಗುವ ಪರೋಕ್ಷ ವ್ಯವಸ್ಥೆ ಬಹುತೇಕ ಜಾರಿಯಲ್ಲಿದೆ.
ʼಆಧಾರ್ ಕಾರ್ಡ್ʼನಲ್ಲಿನ ಬದಲಾವಣೆಗಳು ಈಗ ಮತ್ತಷ್ಟು ಸರಳ
ಇದರ ಮಹತ್ವದಿಂದಾಗಿಯೇ ಜನರು ತಮ್ಮ ಆಧಾರ್ ಕಾರ್ಡ್‌ನಲ್ಲಿ ಮಾಹಿತಿಗಳನ್ನು ಅಪ್‌ಡೇಟ್ ಮಾಡಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಆನ್‌ಲೈನ್ ಮೂಲಕವೂ ಆಧಾರ್ ಕಾರ್ಡ್ ಮಾರ್ಪಾಡಿಗೆ ಸರ್ಕಾರ ಅವಕಾಶ ನೀಡಿದೆ. ಎಲ್ಲರೂ ಈ ಅವಕಾಶ ಬಳಸಿಕೊಳ್ಳಲು ಆಗುತ್ತಿಲ್ಲ ಎಂದು ಮನಗಂಡ ಸರ್ಕಾರವು ಆಧಾರ್ ಕಾರ್ಡಿನ ಮಾತೃ ಸಂಸ್ಥೆಯಾದ ’ವಿಶಿಷ್ಟ ಗುರುತಿನ ಪ್ರಾಧಿಕಾರ’ (ಯುಐಡಿಎಐ) ಮೂಲಕ ಆಧಾರ್ ಸೇವಾ ಕೇಂದ್ರಗಳನ್ನು (ಎಎಸ್‌ಕೆ) ದೇಶಾದ್ಯಂತ ತೆರೆಯುತ್ತಿದೆ.
ಕೆಲಸ ಕಳೆದುಕೊಂಡ ನೌಕರರಿಗೆ ಸಿಹಿ ಸುದ್ದಿ: 3 ತಿಂಗಳ ಸಂಬಳ ನೀಡಲಿದೆ ಸರ್ಕಾರ
ದೇಶದ 122 ನಗರಗಳಲ್ಲಿ ಆಧಾರ್ ನೋಂದಣಿ, ಅಪ್‌ಡೇಟ್‌ಗೆ ನೆರವಾಗುವ ಸೇವಾ ಕೇಂದ್ರಗಳನ್ನು ಯುಐಡಿಎಐ ತೆರೆದಿದೆ. ಆ ಪೈಕಿ 55 ಕೇಂದ್ರಗಳು ಪೂರ್ಣ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 166 ಕೇಂದ್ರಗಳನ್ನು ಕೂಡ ಕಾರ್ಯಾರಂಭ ಮಾಡಲಾಗುತ್ತಿದೆ. ಇದಲ್ಲದೇ ಬ್ಯಾಂಕ್‌ಗಳು, ಅಂಚೆ ಕಚೇರಿಗಳಲ್ಲಿ ಕೂಡ ಸುಮಾರು 52 ಸಾವಿರ ಆಧಾರ್ ನೋಂದಣಿ ಕೇಂದ್ರಗಳಿವೆ.
ಸೇವಾ ಕೇಂದ್ರಗಳ ಮೂಲಕ ವಿಕಲಾಂಗರು ಸೇರಿದಂತೆ 70 ಲಕ್ಷ ಪ್ರಜೆಗಳಿಗೆ ಸೇವೆಯನ್ನು ನೀಡಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಇದುವರೆಗೂ ದೇಶಾದ್ಯಂತ ಒಟ್ಟಾರೆಯಾಗಿ 130.9 ಕೋಟಿ ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ.