ಕರ್ನಾಟಕದ ಕಲಬುರಗಿಯ ಚಿತ್ತಾಪುರದಲ್ಲಿ 2018ರ ಆಗಸ್ಟ್‌ನಲ್ಲಿ ಯಲ್ಲಾಲಿಂಗ ಎಂಬ 10 ವರ್ಷದ ಮಾನಸಿಕ ಅಸ್ವಸ್ಥ ಬಾಲಕ ತಾಯಿಯ ಜತೆಗೆ ದಿನಸಿ ಅಂಗಡಿಗೆ ತೆರಳುತ್ತಿದ್ದ. ಆ ವೇಳೆ ಆತ ದಾರಿ ತಪ್ಪಿಸಿಕೊಂಡು, ಸೀದಾ ಹೋಗಿ ಸೇರಿದ್ದು ರೈಲು ನಿಲ್ದಾಣಕ್ಕೆ. ಅಲ್ಲಿ ನಿಂತಿದ್ದ ರೈಲೊಂದನ್ನು ಏರಿಕೊಂಡು ಸುಮಾರು 3 ಸಾವಿರ ಕಿ.ಮೀ. ದೂರದ ಅಸ್ಸಾಂ ರಾಜ್ಯದ ಕಾಮರೂಪ್ ಜಿಲ್ಲೆ ತಲುಪಿದ.
ಅಲ್ಲಿನ ಭಾಷೆ ತಿಳಿಯದೆಯೇ ಯಲ್ಲಾಲಿಂಗ ಪರದಾಡಿದ. ಸಮೀಪದ ಪೊಲೀಸ್ ಠಾಣೆಗೆ ಹೋದರೂ ಕೂಡ ಈತ ಬರೆದ ಕನ್ನಡದಲ್ಲಿನ ಮನೆ ವಿಳಾಸವು ಅವರಿಗೆ ಅರ್ಥವೇ ಆಗಲಿಲ್ಲ. ಕೊನೆಗೆ ಗುವಾಹಟಿಯಲ್ಲಿನ ಫತಾಸಿಲ್ ಅಂಬಾರಿ ಸ್ಥಳದಲ್ಲಿನ ಸರಕಾರಿ ಮಕ್ಕಳ ಆರೈಕೆ ಕೇಂದ್ರಕ್ಕೆ ಪೊಲೀಸರು ಯಲ್ಲಾಲಿಂಗನನ್ನು ಸೇರಿಸಿದರು. ಆತನಿಗೆ ಉಮೇಶ್ ಎಂದು ನಾಮಕರಣ ಮಾಡಿದರು. ಅನಿವಾರ್ಯವಾಗಿ ಮಾತು ನಿಲ್ಲಿಸಿಕೊಂಡು ಕೇವಲ ಕೈ ಸನ್ನೆಗಳಿಂದಲೇ ಆತ ಸಂವಹನ ಶುರುಮಾಡಿದ.
ಇತ್ತ ಕಡೆ ಕಲಬುರಗಿಯಲ್ಲಿ ಯಲ್ಲಾಲಿಂಗನ ಪೋಷಕರು ಕೂಡ ಪೊಲೀಸರಿಗೆ ದೂರು ನೀಡಿದರು. ಎಷ್ಟೆಷ್ಟೋ ಹುಡುಕಾಡಿದರೂ ಕೂಡ ಪ್ರಯೋಜನವಾಗಲಿಲ್ಲ. ಕೊನೆಗೆ ದೇವರೇ ಒಂದು ದಾರಿ ತೋರಿದ !
ಐಸಿಯುನಲ್ಲಿರುವ ಶೇ.31 ರಷ್ಟು ಕೊರೊನಾ ಸೋಂಕಿತರಲ್ಲಿ ʼಓಮಿಕ್ರಾನ್ʼ ಪತ್ತೆ…! ಬಿಬಿಎಂಪಿ ದಾಖಲೆಗಳಲ್ಲಿ ಮಹತ್ವದ ಮಾಹಿತಿ ಬಹಿರಂಗ
2020ರ ಫೆಬ್ರವರಿಯಲ್ಲಿ ಎನ್‌ಜಿಒವೊಂದು ಯಲ್ಲಾಲಿಂಗನಿದ್ದ ಕೇಂದ್ರದ ಮಕ್ಕಳನ್ನು ಆಧಾರ್ ನೋಂದಣಿ ಕೇಂದ್ರಕ್ಕೆ ಕರೆದೊಯ್ಯಿತು. ಕೆಲವು ತಿಂಗಳ ಬಳಿಕ ಯಲ್ಲಾಲಿಂಗನ ಬಯೋಮೆಟ್ರಿಕ್ ಈ ಮೊದಲೇ ಅಪ್‌ಲೋಡ್ ಆಗಿದೆ. ಆತನ ಆಧಾರ್ ಕಾರ್ಡ್ ಲಭ್ಯವಿದೆ ಎಂಬ ಮಾಹಿತಿಯು ಎನ್‌ಜಿಒಗೆ ಸಿಕ್ಕಿತು.
ಆಗ ಯಲ್ಲಾಲಿಂಗನ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿ ನೋಡಿದಾಗ ಕಲಬುರಗಿಯ ವಿಳಾಸ ಪತ್ತೆಯಾಯಿತು. ಇದೇ, ಜನವರಿ 28ರಂದು ಎನ್‌ಜಿಒ ಸಿಬ್ಬಂದಿ ಹಲವು ಮಕ್ಕಳ ಸಹಾಯವಾಣಿಗಳನ್ನು ಸಂಪರ್ಕಿಸಿ ವಿಫಲವಾದ ಬಳಿಕ ಕರ್ನಾಟಕದ ಪೊಲೀಸರನ್ನು ಸಂಪರ್ಕಿಸಿದರು.
ಅವರ ಮೂಲಕ ಯಲ್ಲಾಲಿಂಗನ ಬಗ್ಗೆ ಪೋಷಕರಿಗೆ ಮಾಹಿತಿ ತಲುಪಿಸಿದರು. ಪೋಷಕರು ಕೂಡಲೇ ಅಸ್ಸಾಂಗೆ ರೈಲು ಹತ್ತಿದರು. ಕಾಮರೂಪ್ ಜಿಲ್ಲೆಯ ಮಕ್ಕಳ ರಕ್ಷಣಾ ಅಧಿಕಾರಿ ಮಲಾಬಿಕಾ ಕಾಲಿತಾ ಅವರು ಸದ್ಯ 14 ವರ್ಷದವನಾಗಿರುವ ಯಲ್ಲಾಲಿಂಗನನ್ನು ಪೋಷಕರಿಗೆ ಹಸ್ತಂತರಿಸಿದಾಗ, ಕಣ್ಣೀರ ಹರ್ಷಧಾರೆ ತಾಯಿ-ಮಗನ ಮುಖದಲ್ಲಿ ಹರಿಯುತ್ತಿತ್ತು. ಅಂದ ಹಾಗೆ, ಇಷ್ಟೆಲ್ಲ ಕಾಳಜಿ ವಹಿಸಿದ ಎನ್‌ಜಿಒ ಹೆಸರು ’’ಡೆಸ್ಟಿನೇಷನ್’’. ಅದರ ಸ್ಥಾಪಕರು ರೂಪಾ ಹಜಾರಿಕಾ.