ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೂ ಚಿಂತಿಸುವ ಅಗತ್ಯವಿಲ್ಲ. ಒಂದು ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಯುಐಡಿಎಐ 1947 ನಂಬರ್ ಜಾರಿ ಮಾಡಿದೆ. ಆಧಾರ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಈ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಯುಐಡಿಎಐ ಟ್ವೀಟರ್ ಮೂಲಕ ಈ ವಿಷ್ಯವನ್ನು ಬಹಿರಂಗಪಡಿಸಿದೆ. 12 ಭಾಷೆಯಲ್ಲಿ ನಿಮಗೆ ಸಹಾಯ ಮಾಡಲಿದೆ. ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಒಂದೇ ಫೋನ್ ಕರೆಯಲ್ಲಿ ಪರಿಹರಿಸಬಹುದು ಎಂದು ಯುಐಡಿಎಐ ಟ್ವೀಟ್ ಮಾಡಿದೆ. 1947 ರಲ್ಲಿ ಆಧಾರ್ ಸಹಾಯವಾಣಿ ಹಿಂದಿ, ಇಂಗ್ಲಿಷ್, ತೆಲುಗು, ಕನ್ನಡ, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಒರಿಯಾ, ಬಂಗಾಳಿ, ಅಸ್ಸಾಮಿ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.
ಈ 1947 ಸಂಖ್ಯೆ ಡ್ಯೂಟಿ ಫ್ರೀ ಆಗಿದೆ. ಸೌಲಭ್ಯಕ್ಕಾಗಿ ಕಾಲ್ ಸೆಂಟರ್ ಪ್ರತಿನಿಧಿಗಳು ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ ಲಭ್ಯವಿರುತ್ತಾರೆ. ಭಾನುವಾರ ಪ್ರತಿನಿಧಿಗಳು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಲಭ್ಯವಿರುತ್ತಾರೆ. ಈ ಸಹಾಯವಾಣಿ ಸಂಖ್ಯೆ ಜನರಿಗೆ ಆಧಾರ್ ದಾಖಲಾತಿ ಕೇಂದ್ರಗಳು, ದಾಖಲಾತಿಯ ನಂತರ ಆಧಾರ್ ಸಂಖ್ಯೆಯ ಸ್ಥಿತಿ ಮತ್ತು ಇತರ ಆಧಾರ್ ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.