ಆಧಾರ್ ಕಾರ್ಡ್‌ನಲ್ಲಿರುವ ವೈಯಕ್ತಿಕ ವಿವರಗಳನ್ನು ಕನ್ನಡ ಸೇರಿದಂತೆ ದೇಶದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಅಪ್ಡೇಟ್ ಮಾಡುವ ಸೌಲಭ್ಯವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ ಹೊರತಂದಿದೆ.
BIG NEWS: ದೆಹಲಿ ED ಕಚೇರಿಗೆ ವಿಚಾರಣೆಗೆ ಹಾಜರಾದ ಶಾಸಕ ಜಮೀರ್ ಅಹ್ಮದ್
ಈ ಕೆಳಕಂಡ ಕ್ರಮಗಳ ಮೂಲಕ ಆಧಾರ್ ವಿವರಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಅಪ್ಡೇಟ್ ಮಾಡಬಹುದಾಗಿದೆ:
1. https://uidai.gov.in/ ಪೋರ್ಟಲ್‌ಗೆ ಭೇಟಿ ನೀಡಿ.
2. ಈಗ Aadhaar Self Service Update Portalಗೆ ಹೋಗಿ.
3. ನಿಮ್ಮ 13-ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ.
4. ಕ್ಯಾಪ್ಚಾ ಮತ್ತು ಭದ್ರತಾ ಕೋಡ್‌ಗಳ ಮೂಲಕ ವಿವರಗಳನ್ನು ಖಾತ್ರಿ ಪಡಿಸಿ.
5. ಇತರೆ ಮುಖ್ಯವಾದ ವಿವರಗಳನ್ನು ಎಂಟರ್ ಮಾಡಿದ ಬಳಿಕ ‘Generate OTP’ ಒತ್ತಿ.
6. ಈಗ ನೀವು ಓಟಿಪಿ ಎಂಟರ್ ಮಾಡಿ ಲಾಗ್ ಇನ್ ಆಗಿ.
7. ‘Update Demographics Data’ ಮೇಲೆ ಕ್ಲಿಕ್ ಮಾಡಿ.
8. ಈಗ ನಿಮ್ಮ ಇಚ್ಛೆಯ ಪ್ರಾದೇಶಿಕ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
9. ಮುಂದಿನ ಹಂತದಲ್ಲಿ ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಿ.
10. ಅರ್ಜಿಯನ್ನು ಸಲ್ಲಿಸಿ.
11. ಈಗ ಇನ್ನೊಂದು ಓಟಿಪಿ ನಿಮ್ಮ ಫೋನ್‌ಗೆ ಬರುತ್ತದೆ.
12. ಈಗ ಓಟಿಪಿ ಎಂಟರ್ ಮಾಡಿ.
13. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು 50 ರೂ. ಶುಲ್ಕ ಪಾವತಿಸಿ.
14. ಈ ಅಪ್ಡೇಟ್ ಅನ್ನು 1-3 ವಾರಗಳಲ್ಲಿ ಸಂಪೂರ್ಣವಾಗಿ ಪರಿಷ್ಕರಿಸಲಾಗುವುದು.