ಯಾವುದೇ ಜಾಗದಿಂದಲೂ ಯಾವುದೇ ಸಮಯದಲ್ಲಿ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಬಹುದಾದ ಸವಲತ್ತನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಕೊಡಮಾಡಿದೆ.
ಪ್ರಾದೇಶಿಕ ಭಾಷೆಗೆ ‘ಆಧಾರ್’ ಬದಲಿಸುವುದು ಹೇಗೆ ಗೊತ್ತಾ…..?
ಆನ್ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಹೀಗೆ ಮಾಡಿ:
1. ಪ್ರಾಧಿಕಾರದ ಲಿಂಕ್ eaadhaar.uidai.gov.in/ಗೆ ಭೇಟಿ ಕೊಡಿ.
2. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ.
3. ನಿಮಗೆ ಮಾಸ್ಕ್ ಇರುವ ಆಧಾರ್ ಕಾರ್ಡ್ ಬೇಕಿದ್ದಲ್ಲಿ, ‘I want a masked Aadhar’ ಮೇಲೆ ಕ್ಲಿಕ್ ಮಾಡಿ.
4. ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ಎಂಟರ್ ಮಾಡಿ.
5. ‘Send OTP’ ಮೇಲೆ ಕ್ಲಿಕ್ ಮಾಡಿ.
6. ಆಧಾರ್ ನೋಂದಾಯಿತವಾದ ನಿಮ್ಮ ದೂರವಾಣಿ ಸಂಖ್ಯೆಗೆ ಓಟಿಪಿ ಬರುವುದು.
7. ಓಟಿಪಿ ಎಂಟರ್ ಮಾಡಿ.
8. ಓಟಿಪಿ ಸಲ್ಲಿಸಿದ ಬಳಿಕ ನಿಮ್ಮ ಆಧಾರ್ ಕಾರ್ಡ್ ವಿವರಗಳು ಹಾಗೂ ಅವುಗಳನ್ನು ಡೌನ್ಲೋಡ್ ಮಾಡುವ ಆಯ್ಕೆ ಬರಲಿದೆ.
9. ಡೌನ್ಲೋಡ್ ಆಯ್ಕೆ ಕ್ಲಿಕ್ ಮಾಡಿ, ಭವಿಷ್ಯದ ಬಳಕೆಗಾಗಿ ಸೇವ್ ಮಾಡಿಟ್ಟುಕೊಳ್ಳಿ.