ಆಧಾರ್ ಕಾರ್ಡ್ ಎಂಬ ಅತ್ಯಂತ ಮೂಲಭೂತ ದಾಖಲೆ ಸರಿ ಇಲ್ಲದಿದ್ದರೆ ದೇಶದಲ್ಲಿ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಕೂಡ ತ್ವರಿತವಾಗಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅಷ್ಟೊಂದು ಮಹತ್ವದ ಗುರುತಿನ ದಾಖಲೆಯಾಗಿ ಆಧಾರ್ ಸಂಖ್ಯೆ ಮಾರ್ಪಟ್ಟಿದೆ.
ಆಧಾರ್ ಸಂಖ್ಯೆ ನಿಮ್ಮ ಹೆಸರಲ್ಲಿ ರಚನೆಯಾದರೆ , ಮುಗಿಯಿತು ಬಳಿಕ ವಿಳಾಸ ಬದಲಾವಣೆ ಮತ್ತು ಮೊಬೈಲ್ ಸಂಖ್ಯೆ ಜೋಡಣೆ ಹಾಗೂ ಬದಲಾವಣೆಗೂ ವಿಶಿಷ್ಟ ಗುರುತಿನ ಪ್ರಾಧಿಕಾರ ಅವಕಾಶ ನೀಡಿದೆ. ಆದರೆ ಹೆಚ್ಚು ಬಾರಿ ಮಾರ್ಪಡಿಸಲು ಅವಕಾಶವಿಲ್ಲ.
ಒಂದು ವೇಳೆ ಆಧಾರ್ ಸಂಖ್ಯೆಗೆ ಜೋಡಣೆ ಆಗಿರುವ ಮೊಬೈಲ್ ನಂಬರ್ ಬದಲಾದರೆ ಅಥವಾ ಸಿಮ್ ಕಳೆದು ಹೋದರೆ ಆಗ ಅನಿರ್ವಾಯವಾಗಿ ಹೊಸ ಮೊಬೈಲ್ ಸಂಖ್ಯೆ ಜೋಡಣೆ ಮಾಡಬೇಕಾಗುತ್ತದೆ. ಏಕೆಂದರೆ, ಆಧಾರ್ ಪರಿಶೀಲನೆ ಸಂಬಂಧಿತ ’ಒಟಿಪಿ’ ಸಂಖ್ಯೆ ಬರುವುದು ಇದೇ ಮೊಬೈಲ್ ಸಂಖ್ಯೆಗೆ.
BIG NEWS: ಸಿಎಂ ಆಗುವುದು ಇರಲಿ; ಮೊದಲು ಚುನಾವಣೆ ಗೆಲ್ಲಲಿ; ಸಿದ್ದರಾಮಯ್ಯಗೆ ಸವಾಲು ಹಾಕಿದ ಈಶ್ವರಪ್ಪ
ಹಾಗಾದರೆ ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಬದಲಾಯಿಸಬೇಕಾದಲ್ಲಿ, ಸ್ಥಳೀಯ ಆಧಾರ್ ಸೇವಾ ಕೇಂದ್ರ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ಸೂಕ್ತ ಅರ್ಜಿ ಭರ್ತಿ ಮಾಡಬೇಕು. ಸ್ಥಳೀಯ ಅಧಿಕೃತ ಆಧಾರ್ ಕೇಂದ್ರ ಪತ್ತೆ ಮಾಡಬೇಕಾದಲ್ಲಿ ’ಎಂಆಧಾರ್ ಆ್ಯಪ್’ ನಲ್ಲಿ ಪಿನ್ಕೋಡ್ ಹಾಕುವ ಮೂಲಕ ಕಂಡುಹಿಡಿಯಬಹುದು.
ಇಲ್ಲವೇ 1947 ಸಹಾಯವಾಣಿಗೆ ಕರೆ ಮಾಡಿ ತಿಳಿಯಬಹುದು. ಮೊಬೈಲ್ ಸಂಖ್ಯೆಯು ಖಾತ್ರಿಗೆ ನಿಮ್ಮ ಬಳಿ ಇಲ್ಲವಾದ ಕಾರಣ ಹೊಸ ಮೊಬೈಲ್ ಸಂಖ್ಯೆ ಜೋಡಣೆ ಖಾತ್ರಿಗೆ ಬೆರಳಚ್ಚುಗಳ ಪರಿಶೀಲನೆ ಬೇಕಾಗುತ್ತದೆ. ಈ ಸೇವೆಗೆ ಸ್ವಲ್ಪ ಶುಲ್ಕವನ್ನು ಕೂಡ ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತದೆ. ಕೆಲವು ದಿನಗಳ ಬಳಿಕ ಆಧಾರ್ ಸಂಖ್ಯೆಗೆ ಹೊಸ ಮೊಬೈಲ್ ಸಂಖ್ಯೆಗೆ ಜೋಡಣೆಯಾದ ಖಾತ್ರಿಯ ಎಸ್ಎಂಎಸ್ ನಿಮಗೆ ತಲುಪಲಿದೆ.