ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಆನ್ಲೈನ್ ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಗಡುವನ್ನು 2025ರ ಜೂನ್ 14ರ ವರೆಗೆ ವಿಸ್ತರಣೆ ಮಾಡಿದೆ.
ಈ ಮೊದಲು 2024ರ ಡಿಸೆಂಬರ್ 14ರವರೆಗೆ ಆಧಾರ್ ಕಾರ್ಡ್ ಗಳ ಉಚಿತ ಅಪ್ಡೇಟ್ ಗೆ ಗಡುವು ನೀಡಲಾಗಿತ್ತು. ಒಂದು ದಶಕದಿಂದ ತಮ್ಮ ಆಧಾರ್ ಕಾರ್ಡ್ ವಿವರಗಳನ್ನು ನವೀಕರಿಸದಿರುವವರು ಈ ಅವಕಾಶ ಬಳಸಿಕೊಳ್ಳಬಹುದು.
ಉಚಿತ ಆನ್ಲೈನ್ ಡಾಕ್ಯುಮೆಂಟ್ ಅಪ್ಲೋಡ್ ಮಾಹಿತಿ ಬಗ್ಗೆ ಪ್ರಾಧಿಕಾರದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ ಈ ಸೇವೆ ಮೈ ಆಧಾರ್ ಪೋರ್ಟಲ್ ನಲ್ಲಿ ಮಾತ್ರ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.