alex Certify ಮೊಬೈಲ್‌ ನೋಂದಣಿಯಾಗದಿದ್ದರೂ ಆಧಾರ್‌ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ನೋಂದಣಿಯಾಗದಿದ್ದರೂ ಆಧಾರ್‌ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಸರ್ಕಾರದ ಯಾವುದೇ ಪ್ರಯೋಜನಗಳನ್ನು ಪಡೆಯಲು ಅತ್ಯಗತ್ಯವಾದ ಆಧಾರ್‌ ಕಾರ್ಡ್ ಬಹುತೇಕ ಸಂದರ್ಭಗಳಲ್ಲಿ ಗುರುತಿನ ಸಾಕ್ಷ್ಯವಾಗಿಯೂ ಕೆಲಸ ಮಾಡುತ್ತದೆ. ಆಧಾರ್‌ ಕಾರ್ಡ್ ಡೌನ್ಲೋಡ್ ಮಾಡುವುದು ಸುಲಭವಾದರೂ ಸಹ ಆಧಾರ್‌ ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೇ ಇದ್ದಲ್ಲಿ ಬಹಳ ಕಿರಿಕಿರಿಗಳನ್ನು ಅನುಭವಿಸಬೇಕಾಗುತ್ತದೆ.

ಆದರೆ ನೀವು ಇದಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್‌ ಡೌನ್ಲೋಡ್ ಮಾಡುವ ಪ್ರಕ್ರಿಯೆಗಳಿಗೆ ಇತ್ತೀಚೆಗೆ ಬಹಳ ಬದಲಾವಣೆಗಳನ್ನು ತಂದಿದೆ.

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಐ ಬ್ರೋ ಫಿಲ್ಲರ್

ಒಂದು ವೇಳೆ ನಿಮ್ಮ ಆಧಾರ್‌ ಕಾರ್ಡ್ ಕಳೆದು ಹೋದರೆ ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆಧಾರ್‌ನೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡದೇ ಇದ್ದರೂ ಸಹ ನೀವು ಕೆಳಕಂಡ ಪ್ರಕ್ರಿಯೆಗಳ ಮೂಲಕ ಆಧಾರ್‌ ಪ್ರತಿ ಪಡೆಯಬಹುದಾಗಿದೆ:

1. ಯುಐಡಿಎಐನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

2. ‘My Aadhaar’ ವಿಭಾಗಕ್ಕೆ ಭೇಟಿ ಮಾಡಿ.

3. ‘Order Aadhaar PVC Card’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

4. ನಿಮ್ಮ 12 ಅಂಕಿಯ ಆಧಾರ್‌ ಸಂಖ್ಯೆಯನ್ನು ನಮೂದಿಸಿ.

5. ಆಧಾರ್‌ ಸಂಖ್ಯೆ ಬದಲಿಗೆ ನೀವು 16 ಅಂಕಿಯ ವರ್ಚುವಲ್ ಗುರುತಿನ ಸಂಖ್ಯೆಯನ್ನೂ ಬಳಸಬಹುದು.

6. ಭದ್ರತೆಯ ಕ್ಯಾಪ್ಚಾ ಕೋಡ್ ನಮೂದಿಸಿ.

ಸಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸಬೇಕೆಂದ್ರೆ ಈ ಮೂರು ವಸ್ತುಗಳನ್ನು ಮುಖ್ಯ ದ್ವಾರದಲ್ಲಿ ಇಡಬೇಡಿ

7. ‘My mobile number is not registered’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

8. ಪರ್ಯಾಯ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಆಧಾರ್‌ ಜೊತೆಗೆ ನೋಂದಣಿಯಾಗದ ಸಂಖ್ಯೆಯನ್ನು ನಮೂದಿಸಿ.

9. ‘Send OTP’ ಕ್ಲಿಕ್ ಮಾಡಿ.

10. ನಿಮ್ಮ ಪರ್ಯಾಯ ಸಂಖ್ಯೆಗೆ ಕಳುಹಿಸಿದ ಓಟಿಪಿ ಸಂಖ್ಯೆ ಲಗತ್ತಿಸಿ.

ಅಪ್ಪಿತಪ್ಪಿಯೂ ಈ ರಾಶಿಯವರು ‘ಬೆಳ್ಳಿ ಉಂಗುರ’ ಧರಿಸಬೇಡಿ

11. ಷರತ್ತುಗಳು ಹಾಗೂ ನಿಬಂಧನೆಗಳ ಚೆಕ್‌ ಬಾಕ್ಸ್‌ ಮೇಲೆ ಕ್ಲಿಕ್ ಮಾಡಿ ‘Submit’ ಕ್ಲಿಕ್ ಮಾಡಿ.

12. ಮುಂದಿನ ಪುಟದಲ್ಲಿ ಆಧಾರ್‌ ಪತ್ರದ ನೋಟ ನಿಮಗೆ ಸಿಗಲಿದೆ.

13. ವಿವರಗಳನ್ನು ಖಾತ್ರಿ ಪಡಿಸಿಕೊಂಡ ಬಳಿಕ ‘Make Payment’ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ ಮೂಲಕ ಸೇವೆಗೆ ಪಾವತಿ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...