ಭಾರತದಲ್ಲಿ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದು. ಸರ್ಕಾರಿ ಸೇವೆ ಸೇರಿದಂತೆ ಖಾಸಗಿ ಸೇವೆಗಳಿಗೂ ಆಧಾರ್ ಕಾರ್ಡ್ ದಾಖಲೆ ರೂಪದಲ್ಲಿ ನೀಡಬೇಕಾಗುತ್ತದೆ. ಆಧಾರ್, ವೈಯಕ್ತಿಕ ವಿವರಗಳ ಜೊತೆ ವ್ಯಕ್ತಿಗಳ ಬಯೋಮೆಟ್ರಿಕ್ ಮಾಹಿತಿ ಒಳಗೊಂಡಿದೆ. ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಜನ್ಮ ದಿನಾಂಕವಿದ್ದು, ಅದನ್ನು ನವೀಕರಿಸಬಹುದು.
ʼಆಧಾರ್ʼ ಹ್ಯಾಕಾಥಾನ್ 2021 ಕುರಿತು ಇಲ್ಲಿದೆ ಮಾಹಿತಿ
ಯುಐಡಿಎಐ, 2019 ರಲ್ಲಿ ಆಧಾರ್ ಕಾರ್ಡ್‌ನ ಹೆಸರು, ಜನ್ಮ ದಿನಾಂಕ ಮತ್ತು ಲಿಂಗದಂತಹ ವಿವರಗಳನ್ನು ಎಷ್ಟು ಬಾರಿ ನವೀಕರಿಸಬಹುದು ಎಂಬ ಆಯ್ಕೆಯನ್ನು ನೀಡಿದೆ. ಆನ್ಲೈನ್ ನಲ್ಲಿ ಈ ಬದಲಾವಣೆಗಳನ್ನು ಮಾಡಬಹುದು. ಹತ್ತಿರದ ಆಧಾರ್ ನೋಂದಣಿ ಕೇಂದ್ರಗಳಲ್ಲಿಯೂ ನವೀಕರಣ ಮಾಡಬಹುದು.
ಇದಕ್ಕೆ ಶುಲ್ಕ ನಿಗಧಿಪಡಿಸಲಾಗಿದೆ. ಗ್ರಾಹಕರು ಮನಸ್ಸಿಗೆ ಬಂದಷ್ಟು ಬಾರಿ, ನವೀಕರಣ ಮಾಡಲು ಸಾಧ್ಯವಿಲ್ಲ. ಕೆಲ ನವೀಕರಣಕ್ಕೆ ಮಿತಿ ನಿಗದಿಪಡಿಸಲಾಗಿದೆ. ಯುಐಡಿಎಐ ತನ್ನ ಅಧಿಕೃತ ಪ್ರಕಟಣೆಯಲ್ಲಿ, ಕಾರ್ಡುದಾರರು ತಮ್ಮ ಆಧಾರ್ ಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಗರಿಷ್ಠ ಎರಡು ಬಾರಿ ಮಾತ್ರ ಬದಲಾಯಿಸಬಹುದು ಎಂದು ಸ್ಪಷ್ಟಪಡಿಸಿದೆ.
SBI Kisan Credit Card: ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಪಡೆಯಲು ಇಲ್ಲಿದೆ ಡಿಟೇಲ್ಸ್
ಜನ್ಮ ದಿನಾಂಕವನ್ನು ಮೂರು ವರ್ಷ ಹೆಚ್ಚು ಅಥವಾ ಕಡಿಮೆ ಮಾಡಲು ಮಾತ್ರ ಅವಕಾಶವಿದೆ. ವಿಳಾಸವನ್ನು ಒಮ್ಮೆ ಮಾತ್ರ ಬದಲಿಸಬಹುದು. ಕಾರ್ಡ್‌ದಾರರು ಆಧಾರ್ ಕಾರ್ಡ್‌ನಲ್ಲಿ ಲಿಂಗವನ್ನು ಒಮ್ಮೆ ಮಾತ್ರ ಬದಲಾಯಿಸಬಹುದು. ಆದ್ರೆ ಇದೆಲ್ಲದಕ್ಕೂ ಕೆಲ ನಿಯಮಗಳಿದ್ದು, ಅದನ್ನು ಪಾಲಿಸಬೇಕಾಗುತ್ತದೆ.