ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯಾಗಿದೆ. ಜನಸಾಮಾನ್ಯರಿಗೆ ಇದ್ರಿಂದ ಲಾಭವಾಗಿದೆ. ಗ್ರಾಹಕರಿಗೆ ಹೆಚ್ಚಿನ ಹಣ ಉಳಿಯಲಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, ಆಧಾರ್ ಪರಿಶೀಲನೆಯ ಮೊತ್ತವನ್ನು ಕಡಿಮೆ ಮಾಡಿದೆ.
ಆಧಾರ್ ಪರಿಶೀಲನೆಯ ಮೊತ್ತವನ್ನು 20 ರೂಪಾಯಿಂದ 3 ರೂಪಾಯಿಗೆ ಇಳಿಸಿದೆ. ಯುಐಡಿಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸೌರಭ್ ಗರ್ಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಶ್ರೀಸಾಮಾನ್ಯನ ಜೇಬಿಗೆ ಮತ್ತೊಂದು ಬರೆ..! ಶೀಘ್ರದಲ್ಲೇ ಏರಿಕೆಯಾಗಲಿದೆ ಆಟೋ ದರ
ಆಧಾರ್ ಪರಿಶೀಲನೆ ದರವನ್ನು 20 ರೂಪಾಯಿಯಿಂದ 3 ರೂಪಾಯಿಗೆ ಇಳಿಸಲಾಗಿದೆ. ಸರ್ಕಾರ ರಚಿಸಿದ ಡಿಜಿಟಲ್ ಮೂಲಸೌಕರ್ಯವನ್ನು ವಿವಿಧ ಏಜೆನ್ಸಿಗಳು ಮತ್ತು ಸಂಸ್ಥೆಗಳು ಉತ್ತಮವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ ಎಂದವರು ಹೇಳಿದ್ದಾರೆ.
ಈವರೆಗೆ ಸುಮಾರು 99 ಕೋಟಿ ಇ-ಕೆವೈಸಿಗಾಗಿ ಆಧಾರ್ ವ್ಯವಸ್ಥೆಯನ್ನು ಬಳಸಲಾಗಿದೆ. ಯುಐಡಿಎಐ ಯಾರೊಂದಿಗೂ ಬಯೋಮೆಟ್ರಿಕ್ ಹಂಚಿಕೊಳ್ಳುವುದಿಲ್ಲ. ಎಲ್ಲಾ ಪಾಲುದಾರರು, ಪ್ರಾಧಿಕಾರದಂತೆಯೇ ಭದ್ರತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಯುಐಡಿಎಐ ಹೇಳಿದೆ.
ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಅ.1ರಿಂದ ಅಂಚೆ ಕಚೇರಿ ಎಟಿಎಂ ಕಾರ್ಡ್ ಬಳಕೆದಾರರ ಜೇಬಿಗೆ ಬೀಳಲಿದೆ ಕತ್ತರಿ
ಹೊಸ ಆಧಾರ್ ಕಾರ್ಡ್ ಪಡೆಯಲು ಹಣವನ್ನು ಪಾವತಿಸಬೇಕಾಗಿಲ್ಲ. ಆದರೆ, ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಇ-ಮೇಲ್ ಇತ್ಯಾದಿ ತಿದ್ದುಪಡಿಯಂತಹ ನವೀಕರಣಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬಯೋಮೆಟ್ರಿಕ್ ಅಪ್‌ಡೇಟ್‌ಗಾಗಿ 100 ರೂಪಾಯಿ ಪಾವತಿಸಬೇಕಾಗುತ್ತದೆ.
ದೇಶದಲ್ಲಿ ಆಧಾರ್ ಕಡ್ಡಾಯ ದಾಖಲೆಯಾಗಿದೆ. ಕೇಂದ್ರ ಸರ್ಕಾರ ಎಲ್ಲಾ ಯೋಜನೆಗಳನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿದೆ.