alex Certify ಆಧಾರ್​ ಕಾರ್ಡ್​ನಲ್ಲಿ ಎಷ್ಟು ಬಾರಿ ಹೆಸರು, ವಿಳಾಸ, ಜನ್ಮ ದಿನಾಂಕ ಬದಲಿಸಬಹುದು…..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್​ ಕಾರ್ಡ್​ನಲ್ಲಿ ಎಷ್ಟು ಬಾರಿ ಹೆಸರು, ವಿಳಾಸ, ಜನ್ಮ ದಿನಾಂಕ ಬದಲಿಸಬಹುದು…..? ಇಲ್ಲಿದೆ ಮಾಹಿತಿ

ಸರ್ಕಾರಿ ಕೆಲಸ ಯಾವುದೇ ಇರಲಿ. ಅಲ್ಲಿ ನಿಮ್ಮ ಆಧಾರ್​ ಕಾರ್ಡ್​ಗಳನ್ನು ಕೇಳಿಯೇ ಕೇಳುತ್ತಾರೆ. ಹೀಗಾಗಿ ಆಧಾರ್​ ಕಾರ್ಡ್ ಎನ್ನುವುದು ಅತ್ಯಂತ ಮುಖ್ಯವಾದ ಒಂದು ದಾಖಲೆಯಾಗಿದೆ. ರಾಜ್ಯ ಹಾಗೂ ಕೇಂದ್ರದ ಯಾವುದೇ ಯೋಜನೆಗಳನ್ನು ನೀವು ಪಡೆಯಬೇಕು ಅಂದರೆ ಅಲ್ಲಿ ಆಧಾರ್​ ಕಡ್ಡಾಯವಾಗಿರುತ್ತದೆ.

ಇದೇ ಕಾರಣಕ್ಕಾಗಿ ಆಧಾರ್​ ಕಾರ್ಡ್​ನಲ್ಲಿರುವ ಎಲ್ಲಾ ಮಾಹಿತಿಗಳು ಸರಿ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ಅನೇಕರಿಗೆ ಆಧಾರ್​ ಕಾರ್ಡ್​ನಲ್ಲಿ ತಮ್ಮ ವಿಳಾಸ, ಹೆಸರು, ಜನ್ಮದಿನಾಂಕ ಹೀಗೆ ಯಾವುದೇ ಮಾಹಿತಿಯನ್ನು ಬದಲಾಯಿಸಬೇಕಾಗಿ ಇರುತ್ತದೆ. ಹಾಗಾದರೆ ನೀವು ಎಷ್ಟು ಬಾರಿ ಆಧಾರ್​ ಕಾರ್ಡ್​ನಲ್ಲಿ ಈ ಬದಲಾವಣೆಗಳನ್ನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಎಷ್ಟು ಬಾರಿ ಆಧಾರ್​ನಲ್ಲಿ ಹೆಸರು ಬದಲಾಯಿಸಬಹುದು..?

ಯುಐಡಿಎಐ ಹೊರಡಿಸಿದ ಅಧಿಸೂಚನೆಯ ಪ್ರಕಾರ ಒಬ್ಬ ವ್ಯಕ್ತಿಯು ಕೇವಲ 2 ಬಾರಿ ಮಾತ್ರ ಆಧಾರ್​ನಲ್ಲಿ ತನ್ನ ಹೆಸರು ಬದಲಾಯಿಸಬಹುದು.

ಜನ್ಮದಿನಾಂಕವನ್ನು ಎಷ್ಟು ಬಾರಿ ಬದಲಿಸಬಹುದು..?

ಆಧಾರ್​ ಕಾರ್ಡ್​ನಲ್ಲಿ ನಿಮ್ಮ ಜನ್ಮ ದಿನಾಂಕವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ. ಡೇಟಾ ಎಂಟ್ರಿಯಲ್ಲಿ ಏನಾದರೂ ಎರರ್​​ ಎಂದು ತೋರಿಸಿದಲ್ಲಿ ಮಾತ್ರ ಜನ್ಮ ದಿನಾಂಕ ಬದಲಾವಣೆಗೆ ಅವಕಾಶ ಇರಲಿದೆ.

ಎಷ್ಟು ಬಾರಿ ವಿಳಾಸ ಬದಲಿಸಬಹುದು..?

ಯುಐಡಿಎಐ ಮಾರ್ಗಸೂಚಿಯ ಪ್ರಕಾರ ಆಧಾರ್​ ಕಾರ್ಡ್​ನಲ್ಲಿ ಕೇವಲ 1 ಬಾರಿ ಮಾತ್ರ ವಿಳಾಸ ಬದಲಾವಣೆ ಮಾಡಬಹುದಾಗಿದೆ. ಲಿಂಗವನ್ನೂ ಕೇವಲ 1 ಬಾರಿ ಮಾತ್ರ ಬದಲಿಸಲು ಅವಕಾಶವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...