ಕೊಪ್ಪಳ: ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ ಸರ್ಕಾರದಿಂದ ಪರಿಹಾರಧನ ನೀಡಬೇಕಾಗಿದ್ದು, ಕುಟುಂಬಸ್ಥರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸುವಂತೆ ಸೂಚಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ 19 ವೈರಾಣು ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರದ 50,000 ರೂ. ಪರಿಹಾರ ಪಾವತಿಸಲು ನಿರ್ಧರಿಸಿದ್ದು, ಇದರನ್ವಯ, ಈ ವರೆಗೆ ಅಧಿಕೃತ ಬಿ.ಎಮ್.ಎಸ್ ತಂತ್ರಾಂದಲ್ಲಿ ನೋಂದಣಿ ಮಾಡಲಾದ 400 ಪ್ರಕರಣಗಳಲ್ಲಿ ಕೊಪ್ಪಳ ತಾಲ್ಲೂಕಿನ 11, ಯಲಬುರ್ಗಾ-3, ಕುಕನೂರು-3, ಗಂಗಾವತಿ-10 ಕುಷ್ಟಗಿ ತಾಲ್ಲೂಕಿನ 8 ಸೇರಿ ಜಿಲ್ಲೆಯ ಒಟ್ಟು 35 ಜನ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆದಾರ್ ಸಂಖ್ಯೆಯನ್ನು ಲಿಂಕ್ ಮಾಡದೆ ಇರುವದರಿಂದ ಅವರ ಖಾತೆಗೆ ಕೇಂದ್ರ ಸರ್ಕಾರದ ಪರಿಹಾರಧನ ಜಮಾ ಆಗಿರುವುದಿಲ್ಲ.
ಆದ್ದರಿಂದ ಆಧಾರ್ ಸಂಖ್ಯೆಗೆ ಬ್ಯಾಂಕ್ ಖಾತೆಯನ್ನು ಮಾಡದೆ ಇರುವ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಶೀಘ್ರವಾಗಿ ಆಧಾರ್ ಲಿಂಕ್ ಮಾಡಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.