ಅಗತ್ಯ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಸೇರಿದೆ. ಸರ್ಕಾರ ಹಾಗೂ ಖಾಸಗಿಯ ಕೆಲ ಸೇವೆಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಆಧಾರ್ ಡೌನ್‌ಲೋಡ್ ಮಾಡಲು ಬಯಸುವವರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ನೀಡದೆ ಹೋದ್ರೂ ನೀವು ಆಧಾರ್ ಡೌನ್ಲೋಡ್ ಮಾಡಬಹುದು. ಯುಐಡಿಎಐ, ಮೊಬೈಲ್ ಸಂಖ್ಯೆಯನ್ನು ನೋಂದಾಯಿಸದವರಿಗೆ ಸಹಾಯ ಮಾಡಲು ಈ ನಿರ್ಧಾರ ಕೈಗೊಂಡಿದೆ.
ನೋಂದಾಯಿತ ಮೊಬೈಲ್ ನಂಬರ್ ಇಲ್ಲದೆ ಹೋದ್ರೂ ಸುಲಭವಾಗಿ, ಆಧಾರ್ ಡೌನ್ಲೋಡ್ ಮಾಡಬಹುದು. ಮೊದಲು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. My Aadhaar ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಮೇಲೆ ಕ್ಲಿಕ್ ಮಾಡಬೇಕು. 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆಯ ಬದಲಿಗೆ 16 ಅಂಕಿಗಳ ವರ್ಚುವಲ್ ಐಡೆಂಟಿಫಿಕೇಶನ್ ಸಂಖ್ಯೆಯನ್ನೂ ನಮೂದಿಸಬಹುದು.
ಫ್ಯಾಟ್ ಕಮ್ಮಿಯಾಗಲು ಅಡುಗೆಯಲ್ಲಿರಲಿ ಈ ‘ಪದಾರ್ಥ’
ಈ ಪ್ರಕ್ರಿಯೆಯ ನಂತರ, ಕ್ಯಾಪ್ಚಾ ಕೋಡ್ ನಮೂದಿಸಬೇಕು. ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಡೌನ್‌ಲೋಡ್ ಮಾಡಲು ಬಯಸಿದರೆ, ‘ನನ್ನ ಮೊಬೈಲ್ ಸಂಖ್ಯೆ ನೋಂದಾಯಿಸಲಾಗಿಲ್ಲ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತ್ರ ಪರ್ಯಾಯ ಸಂಖ್ಯೆಯನ್ನು ಹಾಕಬೇಕಾಗುತ್ತದೆ. ಆಗ ಆ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ, ನಿಯಮಗಳು ಮತ್ತು ಷರತ್ತುಗಳು ಚೆಕ್‌ಬಾಕ್ಸ್ ಕ್ಲಿಕ್ ಮಾಡಿ ಮತ್ತು ನಂತರ ಅಂತಿಮವಾಗಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆಯುತ್ತದೆ. ಅಲ್ಲಿ ಆಧಾರ್ ಮರು ಮುದ್ರಣವನ್ನು ಪರಿಶೀಲನೆ ನಡೆಸಿ. ನಂತ್ರ ಮೇಕ್ ಪೇಮೆಂಟ್ ಮೇಲೆ ಕ್ಲಿಕ್ ಮಾಡಿ, ಪೇಮೆಂಟ್ ಮಾಡಿ. ನಂತ್ರ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿ.