alex Certify ‘ಆಧಾರ್’‌ ಸಂಖ್ಯೆ ಬಳಸಿಯೂ ಮಾಡಬಹುದು ಹಣಪಾವತಿ…! ಇಲ್ಲಿದೆ ಅದರ ಡೀಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಧಾರ್’‌ ಸಂಖ್ಯೆ ಬಳಸಿಯೂ ಮಾಡಬಹುದು ಹಣಪಾವತಿ…! ಇಲ್ಲಿದೆ ಅದರ ಡೀಟೇಲ್ಸ್

Aadhaar card holders Alert! Now you can send money via Aadhaar card number; here's how | Personal Finance News | Zee Newsಕೋವಿಡ್ ಕಾಲಘಟ್ಟದಲ್ಲಿ ಡಿಜಿಟಲ್ ವ್ಯವಹಾರಗಳಿಗೆ ದೇಶದಲ್ಲಿ ಹಿಂದೆಂದೂ ಇಲ್ಲದಷ್ಟು ಅವಲಂಬನೆ ಸೃಷ್ಟಿಯಾಗಿದೆ. ಬಹುತೇಕ ಎಲ್ಲವೂ ಡಿಜಿಟಲ್ ಆಗಿಬಿಟ್ಟಿದೆ ಎನ್ನುವ ಮಟ್ಟಿಗೆ ದಿನಸಿ ಖರೀದಿಯಿಂದ ಹಿಡಿದು ಬಹುವಿಧದ ಪಾವತಿಗಳವರೆಗೂ ಸಕಲವೂ ಆನ್ಲೈನ್ ಪಾವತಿಯಲ್ಲೇ ನಡೆಯುತ್ತಿದೆ.

ಆದರೆ ಕೆಲ ಮಂದಿ ಈ ಡಿಜಿಟಲ್ ಪರ್ವವನ್ನು ಇನ್ನೂ ಏರಲು ಸಾಧ್ಯವಾಗಿಲ್ಲ. ಯುಪಿಐ ವಿಳಾಸ ಅಥವಾ ಸ್ಮಾರ್ಟ್‌ಫೋನ್ ಇಲ್ಲದೇ ಇರುವ ಕಾರಣ ಇಂಥ ಮಂದಿಗೆ ಹಣ ಕಳುಹಿಸುವುದು ಕಷ್ಟವಾಗಿದೆ. ಇದೀಗ ಈ ಸಮಸ್ಯೆಗೆ ಅಂತ್ಯ ಹಾಡಲು ಮುಂದಾಗಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ), ಫೋನ್ ಸಂಖ್ಯೆಗಳೇ ಇಲ್ಲದ ಮಂದಿ ಸಹ ಭೀಮ್ ಮೂಲಕ ತಮ್ಮ ಆಧಾರ್‌ ಸಂಖ್ಯೆ ಬಳಸಿ ಹಣ ಕಳುಹಿಸಬಹುದು ಎಂದು ತಿಳಿಸಿದೆ.

ವಾಸ್ತವಿಕ ಕಾಲದಲ್ಲಿ ಹಣ ವರ್ಗಾವಣೆ ಮಾಡಲು ಅನುವು ಮಾಡಿಕೊಡುವ ಯುಪಿಐ ಆಧರಿತ ವ್ಯವಸ್ಥೆಯೇ ಭೀಮ್. ನಿಮ್ಮ ದೂರವಾಣಿ ಸಂಖ್ಯೆ ಅಥವಾ ನಿಮ್ಮ ಹೆಸರಿನ ಗುರುತಿನ ಮೇಲೆ ಹಣ ವರ್ಗಾವಣೆ ಮಾಡಲು ಭೀಮ್ ನೆರವಾಗುತ್ತದೆ.

ಭೀಮ್ ಮುಖಾಂತರ ಆಧಾರ್‌‌ ಬಳಸಿ ಹಣ ಕಳುಹಿಸುವುದು ಹೀಗೆ

ಭೀಮ್‌ ಬಳಕೆದಾರರು ಮೊದಲಿಗೆ ಫಲಾನುಭವಿಯ 12 ಅಂಕಿಯ ಆಧಾರ್‌ ಸಂಖ್ಯೆ ಕೊಟ್ಟು ಖಾತ್ರಿ ಪಡಿಸಬೇಕು. ಯುಐಡಿಎಐ ಕೊಡುವ ಮಾಹಿತಿ ಅನ್ವಯ ಭೀಮ್ ವ್ಯವಸ್ಥೆಯು ಆಧಾರ್‌ ಲಿಂಕೇಜ್‌ ಜೊತೆಗೆ ಫಲಾನುಭವಿಯ ವಿಳಾಸವನ್ನು ಅಥೆಂಟಿಕೇಟ್ ಮಾಡುತ್ತದೆ. ಇದಾದ ಬಳಿಕ ಬಳಕೆದಾರರು ಹಣ ಕಳುಹಿಸಬಹುದಾಗಿದೆ.

ಸ್ವೀಕೃತಿದಾರರ ಬ್ಯಾಂಕ್ ಖಾತೆಯನ್ನು ಆಧಾರ್‌ ಸಂಖ್ಯೆಯ ಮೇಲೆ ಯುಐಡಿಎಐ ಆರಿಸುತ್ತದೆ. ಈ ಮೂಲಕ ನೀವು ಕಳುಹಿಸಿದ ಹಣವು ಅವರ ಖಾತೆಗೆ ಜಮಾ ಆಗುತ್ತದೆ. ಡಿಜಿಟಲ್ ಪಾವತಿಗಳಿಗೆ ಆಧಾರ್‌ ಹಾಗೂ ಬೆರಳಚ್ಚುಗಳನ್ನು ಸಹ ಬಳಸಬಹುದಾಗಿದೆ.

ಒಂದು ವೇಳೆ ಒಂದೇ ಆಧಾರ್‌ ಸಂಖ್ಯೆಯೊಂದಿಗೆ ಹಲವು ಬ್ಯಾಂಕುಗಳ ಖಾತೆಗಳು ವ್ಯಕ್ತಿಯ ಹೆಸರಿನ ನೋಂದಣಿಯಾಗಿದ್ದಲ್ಲಿ, ಒಂದು ಖಾತೆಯನ್ನು ಆರಿಸಿಕೊಳ್ಳುವ ಆಯ್ಕೆ ನಿಮ್ಮದಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...