alex Certify ನಿಮ್ಮ ʼಆಧಾರ್‌ʼ ವಿವರ ವಂಚಕರಿಗೆ ಸಿಗದಂತೆ ಮಾಡಲುಇಲ್ಲಿದೆ ಒಂದಿಷ್ಟು ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ʼಆಧಾರ್‌ʼ ವಿವರ ವಂಚಕರಿಗೆ ಸಿಗದಂತೆ ಮಾಡಲುಇಲ್ಲಿದೆ ಒಂದಿಷ್ಟು ಟಿಪ್ಸ್‌

ವಂಚಕರ ಕೈಗೆ ನಿಮ್ಮ ಆಧಾರ್‌ ಕಾರ್ಡ್ ಮಾಹಿತಿ ಸಿಕ್ಕಿ ದುರ್ಬಳಕೆಯಾಗದಂತೆ ಜಾಗರೂಕರಾಗಿರಿ ಎಂದು ಆಧಾರ್‌ ವಿತರಕ ಸಂಸ್ಥೆ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನ ಇತ್ತೀಚಿನ ಟ್ವೀಟ್ ಒಂದರಲ್ಲಿ ಎಚ್ಚರಿಕೆ ಕೊಟ್ಟಿದೆ.

ನಿಮ್ಮ ಆಧಾರ್‌ ಕಾರ್ಡನ್ನು ಅಂತರ್ಜಾಲದ ಕೆಫೆಗಳಂಥ ಸಾರ್ವಜನಿಕ ಸ್ಥಳಗಳಲ್ಲಿ ಡೌನ್ಲೋಡ್ ಮಾಡಿ, ಕೆಲಸವಾದ ಕೂಡಲೇ ಅಲ್ಲಿನ ಸಿಸ್ಟಂಗಳಲ್ಲಿರುವ ನಿಮ್ಮ ಆಧಾರ್‌ನ ಪತ್ರಿಗಳನ್ನು ಡಿಲೀಟ್ ಮಾಡಿ ಎಂದಿರುವ ಯುಐಎಡಿಐ, ಹೀಗೆ ಮಾಡದೇ ಇದ್ದಲ್ಲಿ ಭವಿಷ್ಯದಲ್ಲಿ ನಿಮ್ಮ ಆಧಾರ್‌ ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂದು ಅಲರ್ಟ್ ಮಾಡಿದೆ.

BIG NEWS: ಬೆಲೆ ಏರಿಕೆ ಬಿಸಿ ನಡುವೆ ನಿವೃತ್ತ ನೌಕರರಿಗೆ ಶೀಘ್ರವೇ ಗುಡ್ ನ್ಯೂಸ್

“ಇ-ಆಧಾರ್‌ ಡೌನ್ಲೋಡ್ ಮಾಡಲು ಸಾರ್ವಜನಿಕ ಕಂಪ್ಯೂಟರ್‌‌ ಅಥವಾ ಇಂಟರ್ನೆಟ್ ಕೆಫ್/ಕಿಯಾಸ್ಕ್ ಬಳಸಬೇಡಿ. ಒಂದು ವೇಳೆ ನೀವು ಹೀಗೆ ಮಾಡಿದಲ್ಲಿ, ಡೌನ್ಲೋಡ್ ಮಾಡಲಾದ ಆಧಾರ್‌ ಕಾಪಿಗಳನ್ನು ಕೂಡಲೇ ಡಿಲೀಟ್ ಮಾಡಿ” ಎಂದು ಯುಐಡಿಎಐ ಟ್ವಿಟ್ ಮಾಡಿದೆ.

ಈ ಕೆಳಕಂಡ ಕ್ರಮಗಳ ಮೂಲಕ ಆಧಾರ್‌‌ ವಿವರಗಳು ವಂಚಕರ ಕೈಗೆ ಸಿಲುಕದಂತೆ ಮಾಡಬಹುದು:

1. ಮೊಬೈಲ್/ಇ-ಮೇಲ್ ಮುಖಾಂತರ ಓಟಿಪಿ ನೋಂದಣಿ.

2.ಆಧಾರ್‌ ಬಯೋಮೆಟ್ರಿಕ್ಸ್ ಲಾಕಿಂಗ್.

3. ಮಾಸ್ಕ್ ಆಗಿರುವ ಆಧಾರ್‌ ಅಥವಾ ವರ್ಚುವಲ್ ಗುರುತು ಬಳಸಿ.

4. ನಿರಂತರ ಪರಿಶೀಲನೆ ಮಾಡಿ.

— ಇದಕ್ಕಾಗಿ ನೀವು ಯುಐಡಿಎಐ ಪೋರ್ಟಲ್‌ಗೆ ಭೇಟಿ ನೀಡಿ, ‘My Aadhaar’ ಆಯ್ಕೆಯಲ್ಲಿರುವ ‘Verify an Aadhaar Number’ ಉಪ ಆಯ್ಕೆ ಸೆಲೆಕ್ಟ್‌ ಮಾಡಿ ನಿಮ್ಮ 12 ಅಂಕಿಯ ಆಧಾರ್‌ ಸಂಖ್ಯೆಯನ್ನು ನಮೂದಿಸಿ, ಆಧಾರ್‌ ಕಾರ್ಡ್‌ನ ಸಕ್ರಿಯತೆಯನ್ನು ಖಾತ್ರಿ ಮಾಡಿಕೊಳ್ಳಬಹುದಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...