ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ್ ಬಹಳ ಮುಖ್ಯ. ಮೊಬೈಲ್ ಸಿಮ್ ಕಾರ್ಡ್ ತೆಗೆದುಕೊಳ್ಳುವುದ್ರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವವರೆಗೆ ಎಲ್ಲ ಸರ್ಕಾರಿ ಯೋಜನೆ ಲಾಭ ಪಡೆಯಲು ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಲ್ಲಿ ಒಂದಾಗಿದೆ.
ಭಾರತದ ಯಾವುದೇ ಪ್ರಜೆ, ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ, ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಬಹುದು. ಅನಿವಾಸಿ ಭಾರತೀಯರೂ ಆಧಾರ್ ಕಾರ್ಡ್ ಪಡೆಯಬಹುದು. ಅವರಿಗೆ ಆಧಾರ್ ಕಾರ್ಡ್ ನೀಡುವ ಕುರಿತು ಯುಐಡಿಎಐ ಕೆಲ ನಿಯಮಗಳನ್ನು ಜಾರಿಗೆ ತಂದಿದೆ.
ಯುಐಡಿಎಐ ನೀಡಿದ ಮಾಹಿತಿಯ ಪ್ರಕಾರ, ಎನ್ ಆರ್ ಐ ಬಯಸಿದಲ್ಲಿ ಆಧಾರ್ ಕಾರ್ಡ್ ಪಡೆಯಬಹುದು. ಆದರೆ ಇದಕ್ಕಾಗಿ ಅವರು ಭಾರತೀಯ ಪಾಸ್ ಪೋರ್ಟನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಯುಐಡಿಎಐ ಪ್ರಕಾರ, ಎನ್ಆರ್ಐಗೆ ಆಧಾರ್ ನೀಡಲು, ಕೆಲವು ನಿಯಮಗಳನ್ನು ಪಾಲಿಸಬೇಕು. ಉದಾಹರಣೆಗೆ, ಎನ್ಆರ್ಐ ಗೆ ಆಧಾರ್ ಕಾರ್ಡ್ ಪಡೆಯಲು ಭಾರತೀಯ ಪಾಸ್ಪೋರ್ಟ್ ಅಗತ್ಯವಿದೆ. ಪಾಸ್ಪೋರ್ಟ್ನಲ್ಲಿ ಸಂಗಾತಿಯ ಹೆಸರು ಇರಬೇಕು.
ಎನ್ಆರ್ಐ ಮಕ್ಕಳಿಗೆ ಆಧಾರ್ ಕಾರ್ಡ್ ಪಡೆಯಲು ಯುಐಡಿಎಐ ನಿಯಮಗಳನ್ನು ಅನುಸರಿಸಬೇಕು. ಆಧಾರ್ ಕಾರ್ಡ್ಗಾಗಿ ನೀಡಿರುವ ವಿವರಗಳಲ್ಲಿ, ಭಾರತೀಯ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ಗಾಗಿ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳ ಅನುಮೋದನೆಯನ್ನು ಯುಐಡಿಎಐ ಇದುವರೆಗೂ ನೀಡಿಲ್ಲ.
ಯಾವುದೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ,ಎನ್ ಆರ್ ಐ, ಆಧಾರ್ ಗೆ ಅರ್ಜಿ ಸಲ್ಲಿಸಬೇಕು. ಮಾನ್ಯ ಭಾರತೀಯ ಪಾಸ್ಪೋರ್ಟ್ ದಾಖಲೆಯಾಗಿ ಅವಶ್ಯಕ. ದಾಖಲಾತಿ ನಮೂನೆಯಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ಆಧಾರ್ ನೋಂದಾಯಿಸಲು ಇ-ಮೇಲ್ ಐಡಿ ಅಗತ್ಯವಿದೆ. ಘೋಷಣೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಸಹಿ ಮಾಡಿ. ಗುರುತಿನ ಚೀಟಿಯಾಗಿ ಪಾಸ್ಪೋರ್ಟ್ ನೀಡಬೇಕು. ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ದಾಖಲಾತಿ ಸ್ಲಿಪ್ ಪಡೆಯಿರಿ.