ಬೆಂಗಳೂರು : A1 ಆರೋಪಿ ಸಿದ್ದರಾಮಯ್ಯರೇ ರಾಜೀನಾಮೆ ಕೊಟ್ಟು, ನುಡಿದಂತೆ ನಡೆಯಿರಿ ಎಂದು ಜೆಡಿಎಸ್ ಆಗ್ರಹಿಸಿದೆ.
ಟ್ವೀಟ್ ಮಾಡಿರುವ ಜೆಡಿಎಸ್ ಸಿದ್ದರಾಮಯ್ಯ ಅವರೇ ನಿಮಗೆಷ್ಟು ನಾಲಿಗೆ..? ವಿರೋಧ ಪಕ್ಷದಲ್ಲಿದ್ದಾಗ ಒಂದು ನಾಲಿಗೆ… ಆಡಳಿತ ನಡೆಸುವಾಗ ಒಂದು ನಾಲಿಗೆಯೇ…? ರಾಷ್ಟ್ರಪತಿಗಳು ಸಂವಿಧಾನದ ಮುಖ್ಯಸ್ಥರು, ಅವರ ಪ್ರತಿನಿಧಿಗಳಾಗಿ ರಾಜ್ಯಾಪಾಲರು ಪ್ರತಿಯೊಂದು ರಾಜ್ಯದಲ್ಲಿ ಕೆಲಸ ಮಾಡುತ್ತಾರೆ. ಒಂದು ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದೆಯಾ ಎಂಬ ಉಸ್ತುವಾರಿ ನೋಡಿಕೊಳ್ಳುತ್ತಿರುತ್ತಾರೆ. ಸರ್ಕಾರ ತಪ್ಪು ಮಾಡಿದರೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಾರೆ..ಅವರಿಗೆ ಬುದ್ಧಿ ಹೇಳುವ ಹಾಗೂ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇದೆ. ಗವರ್ನರ್ ಅಧಿಕಾರ ಚಲಾಯಿಸಿದಾಗ ಅದು ರಾಜಕೀಯ ಪ್ರೇರಿತ, ದುರುದ್ದೇಶದಿಂದ ಮಾಡಿದ್ದಾರೆ, ಇದು ಪೂರ್ವನಿಯೋಜಿತ ಎಂದರೆ ಜನರು ನಂಬುವುದಿಲ್ಲ.. ಎಂದು ವಿರೋಧ ಪಕ್ಷದಲ್ಲಿದ್ದಾಗ (2011ರಲ್ಲಿ) ನೀವೇ ಆಡಿದ್ದ ಮಾತು…. ಈಗ ಏನು ಹೇಳುತ್ತೀರಿ..? ಮುಡಾ ಪ್ರಕರಣದಲ್ಲಿ A1 ಆರೋಪಿಯಾಗಿರುವ ನೀವು ರಾಜೀನಾಮೆ ಕೊಟ್ಟು, ನುಡಿದಂತೆ ನಡೆಯಿರಿ.. ಎಂದು ಜೆಡಿಎಸ್ ಆಗ್ರಹಿಸಿದೆ.