alex Certify ಬೆಡ್ ರೂಮ್ ಇಲ್ಲದ ಈ ಮನೆ ಬೆಲೆ 15 ಕೋಟಿ ರೂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಡ್ ರೂಮ್ ಇಲ್ಲದ ಈ ಮನೆ ಬೆಲೆ 15 ಕೋಟಿ ರೂ…!

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮಾರಾಟವಾದ ಮನೆಯೊಂದು ಸುದ್ದಿಯಲ್ಲಿದೆ. ಬೆಡ್ ರೂಮ್ ಇಲ್ಲದ ಈ ಮನೆ,ವಿಶ್ವದ ಅತ್ಯಂತ ಹಳೆಯ ಮನೆಗಳಲ್ಲಿ ಒಂದು. ಇದನ್ನು ಬರೋಬ್ಬರಿ 15 ಕೋಟಿಗೆ ಖರೀದಿ ಮಾಡಲಾಗಿದೆ. ಅಚ್ಚರಿಯಾದ್ರೂ ಇದು ಸತ್ಯ.

ಬರೀ ಬಾತ್ ರೂಮ್ ಮಾತ್ರ ಇರುವ ಈ ಮನೆಯನ್ನು ಹರಾಜಿಗೆ ಇಡಲಾಗಿತ್ತು. ಈ ಮನೆ 12 ಕೋಟಿಗೆ ಮಾರಾಟವಾಗಬಹುದೆಂದು ಅಂದಾಜಿಸಿದ್ದೆವು ಎಂದು ರಿಯಲ್ ಎಸ್ಟೇಟ್ ಏಜೆಂಟ್ ಟಾಡ್ ಮತ್ತು ವಿಲ್ಲಿ ತಿಳಿಸಿದ್ದಾರೆ. ಆದ್ರೆ 15 ಕೋಟಿಗೆ ಮಾರಾಟವಾಗಿದೆ.

ವರದಿ ಪ್ರಕಾರ, ಈ ಮನೆಯನ್ನು 1900 ರಲ್ಲಿ ನಿರ್ಮಿಸಲಾಗಿದೆ. ಈ ಮನೆಯ ವಿಶೇಷವೆಂದರೆ ಅದರಲ್ಲಿ ಮಲಗುವ ಕೋಣೆ ಇಲ್ಲ. ಒಂದೇ ಒಂದು ಸಣ್ಣ ಸ್ನಾನಗೃಹ ಮತ್ತು ಅಡುಗೆಮನೆ ಇದೆ.ಇನ್ಸ್ಟಾಗ್ರಾಮ್ ಬಳಕೆದಾರನೊಬ್ಬ ಈ ಮನೆ 120 ವರ್ಷಗಳಷ್ಟು ಹಳೆಯದು ಎಂದಿದ್ದಾನೆ. ಈ ಮನೆಯಲ್ಲಿ ಒಂದು ಬಾತ್ರೂಮ್ ಇತ್ತು. ಆದರೆ ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಡುಗೆಮನೆಯನ್ನು ನಿರ್ಮಿಸಲಾಗಿದೆ.  2800 ಚದರ ಅಡಿ ಜಾಗದಲ್ಲಿ ಸ್ನಾನ ಗೃಹ ನಿರ್ಮಾಣವಾಗಿದೆ. ಈ ಮನೆ ಇಷ್ಟೊಂದು ಬೆಲೆಗೆ ಮಾರಾಟವಾಗಲು ಕಾರಣ ಆ ಪ್ರದೇಶ. ಆ ಪ್ರದೇಶದ ಆಸುಪಾಸಿನಲ್ಲಿ ಮಿಲಿಯನೇರ್‌ಗಳು ಮತ್ತು ಬಿಲಿಯನೇರ್‌ಗಳ ಮನೆಯಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...