alex Certify ‘ನಡುರಸ್ತೆಯಲ್ಲಿ ಶಿಕ್ಷಕಿ ಹಣೆಗೆ ಕುಂಕುಮ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ’ : ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಡುರಸ್ತೆಯಲ್ಲಿ ಶಿಕ್ಷಕಿ ಹಣೆಗೆ ಕುಂಕುಮ ಹಚ್ಚಿ ಬಲವಂತವಾಗಿ ಮದುವೆಯಾದ ಯುವಕ’ : ವಿಡಿಯೋ ವೈರಲ್

ಬಂಕಾ : ಬಿಹಾರದ ಬಂಕಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಶಿಕ್ಷಕಿ ಹಣೆಗೆ ಬಲವಂತವಾಗಿ ಸಿಂಧೂರವನ್ನು (ಕುಂಕುಮ) ಇಟ್ಟು ಮದುವೆಯಾದ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಯುವಕ ಶಾಲಾ ಶಿಕ್ಷಕಿಯನ್ನು ಆಕೆಯ ತಂದೆಯ ಮುಂದೆಯೇ ಬಲವಂತವಾಗಿ ಮದುವೆಯಾಗಲು ಪ್ರಯತ್ನಿಸಿದನು. ತನ್ನನ್ನು ಮದುವೆಯಾಗುವಂತೆ ಆ ವ್ಯಕ್ತಿ ಒತ್ತಡ ಹೇರಿದ್ದಾನೆ ಎಂದು ಶಿಕ್ಷಕಿ ಆರೋಪಿಸಿದ್ದಾರೆ ಮತ್ತು ಅವನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಂಕಾ ಜಿಲ್ಲೆಯ ಅಮರಪುರ ಬ್ಲಾಕ್ ನಲ್ಲಿ ಮಹಿಳೆ ತನ್ನ ತಂದೆಯೊಂದಿಗೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.ಮುಖವನ್ನು ಬಟ್ಟೆಯಿಂದ ಮುಚ್ಚಿದ ವ್ಯಕ್ತಿ ಪಿಸ್ತೂಲ್ ಅನ್ನು ಹೊರತೆಗೆದನು. ಮಹಿಳೆಯ ತಂದೆ ಹೆಲ್ಮೆಟ್ ಧರಿಸಿ ತನ್ನ ಮಗಳನ್ನು ಉಳಿಸಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ನೋಡಬಹುದು. ಆದರೂ ಆರೋಪಿ ಬಲವಂತವಾಗಿ ಕುಂಕುಮ ಹಚ್ಚಿದ್ದಾನೆ. ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...